ಬೆಂಗಳೂರು: ಚಂದನವನದ ಜೋಡಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮಗಳ ನಾಮಕರಣ ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ.

ತಾರಾ ಜೋಡಿ ಮಗಳಿಗೆ ‘ತ್ರಿದೇವಿ ಪೊನ್ನಕ್ಕ’ ಎಂದು ನಾಮಕರಣ ಮಾಡಿದ್ದಾರೆ. ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಮಗಳ ನಾಮಕರಣದಲ್ಲಿ ಹರ್ಷಿಕಾ, ಭುವನ್ ತೊಡಗಿದ್ದರು.

ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಪೂಜಾ ಗಾಂಧಿ, ಅಮೂಲ್ಯ ಸೇರಿ ಹಲವರು ಭಾಗಿಯಾಗಿದ್ದರು.

ಮಗಳ ನಾಮಕರಣದ ಕುರಿತು ಪೋಸ್ಟ್ ಹಂಚಿಕೊಂಡಿದ್ದ ಹರ್ಷಿಕಾ, ‘ಮಗಳಿಗೆ ಈ ಹೆಸರನ್ನು ಏಕೆ ಆಯ್ಕೆ ಮಾಡಿಕೊಂಡೆವು ಎಂದು ಕೇಳಿದರೆ, ಹಿಂದೂ ಧರ್ಮದಲ್ಲಿ, ‘ತ್ರಿದೇವಿ’ ಎಂದರೆ ಮೂರು ಪ್ರಮುಖ ದೇವತೆಗಳು: ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ (ಅಥವಾ ದುರ್ಗಾ). ಅವರನ್ನು ತ್ರಿಮೂರ್ತಿಗಳ (ಬ್ರಹ್ಮ, ವಿಷ್ಣು, ಶಿವ) ಪತ್ನಿಯರು ಎಂದು ಪರಿಗಣಿಸಲಾಗುತ್ತದೆ ಮತ್ತು ಕ್ರಮವಾಗಿ ಜ್ಞಾನ, ಸಂಪತ್ತು/ಸಮೃದ್ಧಿ ಮತ್ತು ಶಕ್ತಿ/ಪ್ರೀತಿಯನ್ನು ಪ್ರತಿನಿಧಿಸುತ್ತದೆ.
ತ್ರಿದೇವಿ = ‘ತ್ರಿ’ ಏಕೆಂದರೆ ಅವಳು ತನ್ನ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ಬಲವಾದ ಸಂಖ್ಯೆ ಮೂರನ್ನು ಹೊಂದಿದ್ದಾಳೆ. ‘ದೇವಿ’ ಏಕೆಂದರೆ ಅವಳು ನವರಾತ್ರಿಯ ಮೊದಲ ದಿನದಂದು ಜನಿಸಿದಳು ಮತ್ತು ಮೂಕಾಂಬಿಕಾ ದೇವಿಯಿಂದ ನಮಗೆ ಉಡುಗೊರೆಯಾಗಿ ಬಂದಳು.
ಪೊನ್ನಕ್ಕ = ಇದು ಅವಳ ಪೋಷಕರಿಬ್ಬರ ಅಂದರೆ ನಮ್ಮ ಹೆಸರುಗಳ ಸಂಯೋಜನೆಯಾಗಿದೆ. ಪೊನ್ನಣ್ಣ + ಹರ್ಷಿಕಾ = ‘ಪೊನ್ನಕ್ಕ’. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮಗುವಿನ ಮೇಲೆ ಸದಾ ಇರಲಿ ಎಂದು ಕೇಳಿಕೊಳ್ಳುವುದಾಗಿ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.