ಸೋಮವಾರ, ಡಿಸೆಂಬರ್ 5, 2022
24 °C

ಜನಸಂದಣಿಯಲ್ಲಿ ಇಬ್ಬರು ಮಲಯಾಳಿ ಯುವ ನಟಿಯರ ಮೇಲೆ ಲೈಂಗಿಕ ದೌರ್ಜನ್ಯದ ಯತ್ನ?

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೇರಳದಲ್ಲಿ ಚಿತ್ರವೊಂದರ ಪ್ರಚಾರಕ್ಕೆ ಮಾಲ್‌ಗೆ ತೆರಳಿದ್ದ ವೇಳೆ ಅಲ್ಲಿ ನೆರೆದಿದ್ದ ಜನಸಂದಣಿಯಲ್ಲೇ ಇಬ್ಬರು ಮಲಯಾಳಿ ಯುವ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವರದಿಯಾಗಿದೆ.

ಗ್ರೇಸ್ ಅಂಟೋನಿ ಹಾಗೂ ಸಾನ್ಯಾ ಇಯ್ಯಪ್ಪನ್ ಎಂಬ ಇಬ್ಬರು ನಟಿಯರು ಈ ಆರೋಪ ಮಾಡಿದ್ದಾರೆ. ಕೋಯಿಕ್ಕೋಡ್‌ನ ಹೈಲೈಟ್ ಮಾಲ್‌ನಲ್ಲಿ ಸಾಟರ್‌ಡೇ ನೈಟ್ ಸಿನಿಮಾ ಪ್ರಚಾರ ವೇಳೆ ಈ ಘಟನೆ ಇತ್ತೀಚೆಗೆ ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ವ್ಯಕ್ತಿಗಳು ನಟಿಯ ಕೈಹಿಡಿದು ಅಸಭ್ಯವಾಗಿ ವರ್ತಿಸುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಆ ಸಂದರ್ಭದಲ್ಲಿ ತಮಗೆ ಆದ ಅನುಭವವನ್ನು ನಟಿಯರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಘಟನೆಯನ್ನು ಖಂಡಿಸಿದ್ದಾರೆ. ಕೆಲ ಅಸಹ್ಯಕರ ವ್ಯಕ್ತಿಗಳು ಜನಸಂದಣಿಯಲ್ಲಿ ತಮ್ಮ ಕೈಯನ್ನು ಹಿಡಿದು ಎಳೆದರು, ಮೈಯನ್ನು ಸವರಲು ನೋಡಿದರು. ಇಂಥವರ ಮೇಲೆ ಸೂಕ್ತ ಕ್ರಮಗಳು ಆಗಬೇಕು ಎಂದು ಆಗ್ರಹಿಸಿದ್ದಾರೆ.

ವ್ಯಕ್ತಿಗಳು ನಮ್ಮನ್ನು ಮುಟ್ಟಿದ್ದು ಸೌಮ್ಯವಾಗಿರಲಿಲ್ಲ. ನಮಗೆ ಲೈಂಗಿಕ ದೌರ್ಜ್ಯನ್ಯವಾಗಿದೆ ಎಂದು ನಟಿಯರು ನೋವು ತೋಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ದೂರು ದಾಖಲಾಗಿಲ್ಲ. ಸಾಟರ್‌ಡೇ ನೈಟ್ ಸಿನಿಮಾ ಅಕ್ಟೋಬರ್ 5 ಕ್ಕೆ ಬಿಡುಗಡೆಯಾಗಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು