ಬುಧವಾರ, ನವೆಂಬರ್ 25, 2020
19 °C

ಒಟಿಟಿಯಲ್ಲಿ ಎರಡು ಥ್ರಿಲ್ಲರ್ ಸಿನಿಮಾಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಧಕಾರಂ

ಸೂಪರ್ ನ್ಯಾಚುರಲ್ ಥ್ರಿಲ್ಲರ್ ಕತೆ ಹೊಂದಿರುವ ತಮಿಳು ಚಿತ್ರ ‘ಅಂಧಕಾರಂ’. ಈ ಚಿತ್ರವು ನವೆಂಬರ್ 24ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಅರ್ಜುನ್‌ ದಾಸ್ ಹಾಗೂ ವಿನೋದ್ ಕಿಶನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ವಿನೋದ್ ಅವರದ್ದು ಕುರುಡನ ಪಾತ್ರ. ಈ ನಿಮಾಕ್ಕೆ ವಿಘ್ನರಾಜನ್ ನಿರ್ದೇಶನವಿದೆ. ಎ ಫಾರ್‌ ಆ್ಯಪಲ್ ಪ್ರೊಡಕ್ಷನ್‌ ಅಡಿಯಲ್ಲಿ ಅಟ್ಲಿ, ಬ್ಯಾನರ್ ಪ್ಯಾಷನ್ ಸ್ಟುಡಿಯೋಸ್ ಅಡಿಯಲ್ಲಿ ಸುಧನ್ ಸುಂದರಂ ಹಾಗೂ ಜಯರಾಂ, ಒ2 ಪಿಕ್ಚರ್ಸ್ ಸಂಸ್ಥೆಯ ಕೆ. ಪೂರ್ಣಚಂದ್ರ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಪೂಜಾ ರಾಮಚಂದ್ರನ್, ಮಿಶಾ ಘೋಷಲ್, ಜೀವಾ ರವಿ, ರೈಲ್ ರವಿ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ರಾತ್ ಬಾಕಿ ಹೇ

ಅವಿನಾಶ್ ದಾಸ್ ನಿರ್ದೇಶನದ ರಾತ್ ಬಾಕಿ ಹೇ ಥ್ರಿಲ್ಲರ್ ಸಿನಿಮಾ ಇಂದು ಜೀ 5ನಲ್ಲಿ ಬಿಡುಗಡೆಯಾಗಲಿದೆ. ರಾಹುಲ್ ದೇವ್, ಅನೂಪ್‌ ಸೋನಿ ಹಾಗೂ ಪೌಲಿ ದಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದು ಅತುಲ್ ಸತ್ಯ ಅವರ ಪ್ರಸಿದ್ಧ ನಾಟಕ ‘ಬ್ಯಾಲಿಗುಂಜೆ -1990’ ಅನ್ನು ಆಧರಿಸಿದ ಸಿನಿಮಾ ಆಗಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಮಿಡ್ಲ್ ಕ್ಲಾಸ್ ಮೆಲೊಡೀಸ್‌

ಟಾಲಿವುಡ್‌ನ ರೌಡಿ ಎಂದೇ ಕರೆಸಿಕೊಳ್ಳುವ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ಚಿತ್ರ ‘ಮಿಡ್ಲ್ ಕ್ಲಾಸ್ ಮೆಲೊಡೀಸ್‌’. ಈ ಚಿತ್ರ ಇಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ವಿನೋದ್ ಅನಂತೋಜು ನಿರ್ದೇಶನ ಈ ಸಿನಿಮಾದಲ್ಲಿ ವರ್ಷಾ ಬೊಲ್ಲಮ್ಮ ಆನಂದ್‌ಗೆ ನಾಯಕಿಯಾಗಿ ನಟಿಸಿದ್ದಾರೆ.

ಚೈತನ್ಯ ಗರಿಕಿಪತಿ, ದಿವ್ಯಾ ಶ್ರೀಪಾದ, ಗೋಪರಾಜು ರಮಣ, ಸುರಭಿ ಪ್ರಭಾವತಿ, ಪ್ರೇಮ್ ಸಾಗರ್‌, ಪ್ರಭಾವತಿ ವರ್ಮಾ ಮೊದಲಾದವರು ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಆನಂದ ದೇವರಕೊಂಡ ಅವರದ್ದು ಮಧ್ಯಮ ವರ್ಗದ ಹುಡುಗನ ಪಾತ್ರ. ಈ ಸಿನಿಮಾದಲ್ಲಿ ಗುಂಟೂರು ಪಾಂತ್ರ್ಯದ ಭಾಷೆ ಸೊಡಗಿದೆ. ಸಿನಿಮಾಕ್ಕಾಗಿ ಆನಂದ್ ಅಡುಗೆ ಕಲಿತಿರುವುದು ವಿಶೇಷ. ದೊರಸಾನಿ ಸಿನಿಮಾಕ್ಕೆ ಸಿನಿಮಾಟೊಗ್ರಫಿ ಮಾಡಿರುವ ಸನ್ನಿ ಕುರಪತಿ ಈ ಸಿನಿಮಾಕ್ಕೂ ಸಿನಿಮಾಟೊಗ್ರಫಿ ಮಾಡಿದ್ದಾರೆ. ಸ್ವೀಕಾರ್ ಅಗಸ್ತಿ ಹಾಗೂ ಆರ್‌ಎಚ್‌ ವಿಕ್ರಂ ಸಂಗೀತ ಸಿನಿಮಾಕ್ಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು