ಟಾಲಿವುಡ್ ನಟ ನಾನಿ ಅಭಿನಯದ ‘ಜೆರ್ಸಿ’ ಚಿತ್ರ ಟೊರೊಂಟೊ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ಎಲ್ಲರಿಗೂ ಗೊತ್ತಿದೆ. ಈ ನಡುವೆ ಸುಧೀರ್ ಬಾಬು ಜೊತೆಗೆ ನಾನಿ ನಟಿಸಿರುವ ತೆಲುಗಿನ ‘ವಿ’ ಸಿನಿಮಾ ಸೆಪ್ಟೆಂಬರ್ 5ರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ನಾನಿ ಅವರದು ಸೈಕೊ ಕಿಲ್ಲರ್ ಪಾತ್ರ. ಸುಧೀರ್ ಬಾಬು ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥನ ಇದಾಗಿದೆ. ಅಂದಗಾಗೆ ಇದು ನಾನಿ ನಟನೆಯ 25ನೇ ಸಿನಿಮಾವೂ ಹೌದು. ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಮುಖಾಮುಖಿ ಕಥನ ಇದು. ಪೊಲೀಸ್ ಮತ್ತು ಕ್ರೈಮ್ ಕಥೆಯ ನಡುವೆಯೇ ಆ್ಯಕ್ಷನ್, ಕಾಮಿಡಿಯೂ ಇದರಲ್ಲಿ ಇದೆಯಂತೆ.

ಇಂದು ಒಂದು ನಿಮಿಷ ನಲವತ್ತೈದು ಸೆಕೆಂಡ್ಗಳ ಟ್ರೇಲರ್ ಬಿಡುಗಡೆಯಾಗಿದೆ. ಎರಡು ಪಾತ್ರಗಳ ನಡುವೆ ಮೈಂಡ್ ಗೇಮ್ ಕಥಾನಕವನ್ನು ಟ್ರೇಲರ್ ತೆರೆದಿಟ್ಟಿದೆ. ಸುಧೀರ್ ತೊಂದರೆಗೆ ಸಿಲುಕಿದಾಗ ಅವರಿಗೆ ನೆರವಾಗುವ ಪಾತ್ರದಲ್ಲಿ ನಟಿ ನಿವೇತಾ ಥಾಮಸ್ ಕಾಣಿಸಿಕೊಂಡಿದ್ದಾರೆ.

‘ವಿ’ ಚಿತ್ರದ ಮೇಲೆ ನಾನಿ ಅವರಿಗೆ ನಿರೀಕ್ಷೆ ಹೆಚ್ಚಿದೆ. ಭಿನ್ನ ಬಗೆಯ ಪಾತ್ರಗಳಲ್ಲಿ ನಟಿಸಿರುವ ಅವರ ಇದರಲ್ಲಿಯೂ ಪ್ರಯೋಗಕ್ಕೆ ಒಗ್ಗಿಕೊಂಡಿದ್ದಾರೆ. ‘ಚಿತ್ರಕಥೆಯು ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ. ನಿರ್ದೇಶಕ ಮೋಹನ ಕೃಷ್ಣ ಅವರೊಟ್ಟಿಗೆ ಇದು ನನ್ನ ಮೂರನೇ ಚಿತ್ರ. ನನ್ನ ಅಭಿಮಾನಿಗಳನ್ನು ರಂಜಿಸುವ ಅಂಶಗಳು ಹೇರಳವಾಗಿವೆ’ ಎಂದಿದ್ದಾರೆ ನಾನಿ.

ಅದಿತಿ ರಾವ್ ಹೈದರಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದ್ದಾರೆ. ಎಸ್. ತಮನ್ ಅವರ ಹಿನ್ನೆಲೆ ಸಂಗೀತವಿದೆ. ಪಿ.ಜಿ. ವಿಂಡಾ ಅವರ ಛಾಯಾಗ್ರಹಣವಿದೆ. ಸಂಕಲನ ನಿರ್ವಹಣೆ ಮಾರ್ತಾಂಡ ಕೆ. ವೆಂಕಟೇಶ್ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.