ಗುರುವಾರ , ಫೆಬ್ರವರಿ 27, 2020
19 °C

ಪ್ರೇಮಿಗಳ ದಿನ ಚಂದನವನದಲ್ಲಿ 'ಮುತ್ತಿನ ಮಳೆ'...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಂದನವನದಲ್ಲಿ ಪ್ರೇಮಿಗಳ ದಿನದ (ಫೆಬ್ರುವರಿ 14) ಅಂಗವಾಗಿ ವಿವಿಧ ಚಿತ್ರತಂಡಗಳು ‘ಮುತ್ತನ್ನೇ‘ ಮುಖ್ಯವಾಗಿರಿಸಿಕೊಂಡು ಪೋಸ್ಟರ್‌ ಮತ್ತು ಟೀಸರ್‌ಗಳನ್ನು ಬಿಡುಗಡೆ ಮಾಡಿವೆ. 

ಸಿನಿಮಾ ಅಭಿಮಾನಿಗಳನ್ನು ಸೆಳೆಯಲು ಚಿತ್ರತಂಡಗಳು ಆಕರ್ಷಕವಾಗಿ ಮುತ್ತಿನ ಕಸರತ್ತು ಮಾಡಿವೆ. ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ‘ಮುತ್ತಿನ‘ ಟೀಸರ್‌ ಮತ್ತು ಪೋಸ್ಟರ್‌ಗಳು ಅಬಿಮಾನಿಗಳ ಮತ್ತೇರಿಸಿರುವುದು ಸುಳ್ಳಲ್ಲ! ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ಮತ್ತು ಟೀಸರ್‌ಗಳು ವೈರಲ್‌ ಆಗಿವೆ. 

ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದಲ್ಲಿ ರಚಿತಾ ರಾಮ್‌ ಮತ್ತು ನಾಯಕ ರಾಣಾ ಅವರ ಲಿಪ್‌ಲಾಕ್‌ ದೃಶ್ಯ ವೈರಲ್‌ ಆಗಿದೆ. ಈ ಚಿತ್ರದ ಟೀಸರ್‌ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ನಟ ಸಂಚಾರಿ ವಿಜಯ್ ಹಾಗೂ ಅನನ್ಯ ಶೆಟ್ಟಿ ಅಭಿನಯದ 'ಮೇಲೊಬ್ಬ ಮಾಯಾವಿ' ಸಿನಿಮಾದ ಪೋಸ್ಟರ್ ಕೊಡ ನಿನ್ನೆ ಬಿಡುಗಡೆಯಾಗಿದೆ. ಈ ಪೋಸ್ಟರ್‌ ಕೂಡ ಮುತ್ತಿನ ದೃಶ್ಯವನ್ನು ಹೊತ್ತು ತಂದಿದೆ. 

ಪ್ರೇಮಿಗಳ ದಿನಕ್ಕಾಗಿ ಭರತ್ ಎಸ್ ನಾವುಂದ ನಿರ್ದೇಶನದ 'ಮುಗಿಲ್ ಪೇಟೆ' ಚಿತ್ರತಂಡ ಕೂಡ ಕಿಸ್ಸಿಂಗ್‌ ದೃಶ್ಯ ಇರುವ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ರವಿಚಂದ್ರನ್‌ ಪುತ್ರ ಮನೋರಂಜನ್‌ ನಾಯಕ ನಟರಾಗಿ ನಟಿಸಿದ್ದಾರೆ. 

ತೆಲುಗಿನ 'ಆರ್‌ಎಕ್ಸ್‌100' ಸಿನಿಮಾ ಕನ್ನಡದಲ್ಲಿ ರಿಮೇಕ್‌ ಆಗುತ್ತಿದೆ. ಇದರಲ್ಲಿ ಧೀರೇನ್ ರಾಮ್‌ಕುಮಾರ್‌, ಮಾನ್ವಿತಾ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಶಿವ 143' ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರತಂಡ ಕೂಡ ಮುತ್ತಿನ ದೃಶ್ಯ ಇರುವ ಪೋಸ್ಟರ್‌ ಬಿಡುಗಡೆ ಮಾಡಿದೆ. 

ಚಂದನವನ ಮಾತ್ರವಲ್ಲದೆ, ಬಾಲಿವುಡ್‌, ಟಾಲಿವುಡ್‌ ಹಾಗೂ ತಮಿಳು ಸಿನಿಮಾಗಳ ಹಲವು ಪೋಸ್ಟರ್‌, ಟೀಸರ್‌ಗಳನ್ನು ಬಿಡುಗಡೆಮಾಡಿವೆ. ಈ ಪೋಸ್ಟರ್‌ ಮತ್ತು ಟೀಸರ್‌ಗಳಲ್ಲೂ ಮುತ್ತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು