ಸೋಮವಾರ, ಅಕ್ಟೋಬರ್ 3, 2022
25 °C

ನಟ ಧನ್ವೀರ್ ಅಭಿನಯದ ವಾಮನ ಟೀಸರ್‌: ಹೈಪ್​ ಸೃಷ್ಟಿಸಿದ ‘ಶೋಕ್ದಾರ್‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂದನವನದ ‘ಶೋಕ್ದಾರ್’ ಎಂದೇ ಖ್ಯಾತರಾಗಿರುವ ನಟ ಧನ್ವೀರ್ ಗೌಡ ಅಭಿನಯದ ‘ವಾಮನ‘ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸೌಂಡ್‌ ಮಾಡುತ್ತಿದೆ.

ಪಕ್ಕಾ ಕರ್ಮಶಿಯಲ್‌ ಆಗಿರುವ ಈ ಚಿತ್ರದಲ್ಲಿ ‘ಧನ್ವೀರ್‌‘ ಮಾಸ್‌ ಎಂಟ್ರಿ ಅದ್ದೂರಿಯಾಗಿದೆ. ಆ್ಯಕ್ಷನ್‌ ಚಿತ್ರಕ್ಕೆ ಮಾಸ್‌ ಡೈಲಾಗ್‌ಗಳ ಮೂಲಕ 'ಶೋಕ್ದಾರ್'' ಜೀವ ತುಂಬಿದ್ದಾರೆ. ಮಾಸ್‌ ಎಂಟ್ರಿ, ಪಂಚಿಂಗ್‌ ಡೈಲಾಗ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.   

1.50 ನಿಮಿಷ ಇರುವ ‘ವಾಮನ’ ಟೀಸರ್ ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಶಂಕರ್ ರಾಮನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಕುಮಾರ್ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ಯುವ ಸಿನಿಮಾ ವಿಮರ್ಶಕ, ವಿಡಿಯೊ ಜಾಕಿ ಕೌಶಿಕ್‌ ನಿಧನ

ಧನ್ವೀರ್ ಗೌಡಗೆ ಜೋಡಿಯಾಗಿ ‘ಏಕ್ ಲವ್ ಯಾ’ ಖ್ಯಾತಿಯ ನಟಿ ರೀಷ್ಮಾ ನಾಣಯ್ಯ ಅಭಿನಯಿಸುತ್ತಿದ್ದಾರೆ. ಸಂಪತ್, ಅಚ್ಯುತ್ ಕುಮಾರ್, ತಾರಾ ಅನುರಾಧ, ಶಿವರಾಜ್ ಕೆ.ಆರ್.ಪೇಟೆ, ಕಾಕ್ರೋಚ್ ಸುಧಿ ಸೇರಿದಂತೆ ಇತರರು ನಟಿಸಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:  ರಾಹುಲ್‌ ಜೈನ್‌ ವಿರುದ್ಧ ಅತ್ಯಾಚಾರ ದೂರು: ಆರೋಪ ನಿರಾಕರಿಸಿದ ಗಾಯಕ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು