ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ‘ವರ್ಣಮಾಲೆ’ಯೆಂಬ ಈ ಭಿನ್ನವಾದ ಹಾಡನ್ನು ಸುನಿ ಅವರೇ ಬರೆದಿದ್ದು, ಶೀಘ್ರದಲ್ಲೇ ಸಿನಿಮಾವೂ ತೆರೆಗೆ ಬರಲಿದೆ.

‘ಇವನೊಂಥರ ಈ ಹ್ರಸ್ವಸ್ವರ, ಅವಳೊoಥರ ಆ ದೀರ್ಘಸ್ವರ...’ ಎಂದು ಆರಂಭವಾಗುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತವಿದೆ. ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ 2022ರಲ್ಲಿ ಆರಂಭವಾಗಿತ್ತು. ಎಲ್ಲಾ ಪ್ರಕಾರದ ಸಿನಿಮಾಗಳ ಪ್ರಯೋಗ ಮಾಡಿರುವ ಸಿಂಪಲ್ ಸುನಿ, ಈ ಸಿನಿಮಾ ಮೂಲಕ ಪ್ರೇಮಕಥೆಯೊಂದನ್ನು ಸೈಂಟಿಫಿಕ್ ಥ್ರಿಲ್ಲರ್ ಮಾದರಿಯಲ್ಲಿ ತೆರೆಗೆ ತರುತ್ತಿದ್ದಾರೆ. ಫ್ಯಾಂಟಸಿ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ಈ ಚಿತ್ರದಲ್ಲಿ ವಿಎಫ್ಎಕ್ಸ್ ಕಲಾವಿದನ ಪಾತ್ರದಲ್ಲಿ ದುಷ್ಯಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ಅವರೆತ್ತುವ ಅವತಾರಕ್ಕೆ ಪೂರಕವಾಗಿ ಆಶಿಕಾ ಕೂಡಾ ಹಲವು ಭಿನ್ನಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇವಕನ್ಯೆಯಾಗಿ, ಪೋರ್ಚುಗೀಸ್ ಮರ್ಚೆಂಟ್ ಆಗಿ ಹೀಗೆ ನಾನಾ ಪಾತ್ರಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾಗೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸುನಿ ಅವರೇ ಬರೆದಿದ್ದಾರೆ. ಮಾತಾ ಮೂವಿ ಮೇಕರ್ಸ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡುತ್ತಿದ್ದು, ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣ ಸಿನಿಮಾಗಿದೆ. ಮಡಿಕೇರಿ, ಮಂಗಳೂರು, ಪೋರ್ಚುಗಲ್ನಲ್ಲಿ ಸಿನಿಮಾದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ‘ಬಿಗ್ಬಾಸ್’ ಖ್ಯಾತಿಯ ಕಿಶನ್ ಬಿಳಗಲಿ ‘ಅನಾಮದೇವ’ ಎಂಬ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.