ಮಂಗಳವಾರ, ಅಕ್ಟೋಬರ್ 20, 2020
23 °C

ಹಿಂದಿ ಚಿತ್ರಕ್ಕೆ ಜನಪ್ರಿಯ ಪ್ರಾರ್ಥನಾ ಗೀತೆ ಬರೆದಿದ್ದ ಅಭಿಲಾಷ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Abhilash

ಮುಂಬೈ: ಪ್ರಾರ್ಥನೆಯಂತೆ ಇದ್ದ ‘ಇತ್‌ನಿ ಶಕ್ತಿ ಹಮೇ ದೇನಾ ದಾತಾ, ಮನ್‌ ಕಿ ವಿಶ್ವಾಸ್‌ ಕಮ್‌ಝೋರ್‌ ಹೋ ನ..’ ಗೀತೆ ರಚಿಸಿದ್ದ ಚಿತ್ರಸಾಹಿತಿ ಅಭಿಲಾಷ್‌ (74) ಅವರು ಉದರಸಂಬಂಧಿ ಕಾಯಿಲೆಯಿಂದ ಸೋಮವಾರ ಮುಂಬೈನ ಗೋರೆಗಾಂವ್‌ನ ಸ್ವಗೃಹದಲ್ಲಿ ನಿಧನರಾದರು.

ನಾನಾ ಪಾಟೇಕರ್‌ ಪ್ರಮುಖ ಪಾತ್ರದಲ್ಲಿದ್ದ ‘ಅಂಕುಶ್‌’ ಚಿತ್ರಕ್ಕೆ ಅವರು ಈ ಗೀತೆ ಬರೆದಿದ್ದರು. 1986ರಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಪುಷ್ಪಾ ಪಗಧರೆ ಹಾಡಿದ್ದ ಈ ಗೀತೆ ಎಂಟು ಭಾಷೆಗಳಿಗೆ ಅನುವಾದಗೊಂಡಿತ್ತು. ಹಲವು ಶಾಲೆಗಳಲ್ಲಿ ಪ್ರಾರ್ಥನೆಯಾಗಿತ್ತು. ದೆಹಲಿಯಲ್ಲಿ ಜನಿಸಿದ ಓಂ ಪ್ರಕಾಶ್‌ ಚಿತ್ರಸಾಹಿತಿಯಾಗಿ ಪ್ರಸಿದ್ಧಿಗೆ ಬಂದಿದ್ದು ‘ಅಭಿಲಾಷ್‌’ ಹೆಸರಿನ ಮೂಲಕ.‌

ರಫ್ತಾರ್‌ (1975), ಆವಾರಾ ಲಡ್ಕಿ (1975), ಸಾವನ್‌ ಕೊ ಆನೇ ದೊ (1979) ಮೊದಲಾದ ಚಿತ್ರಗಳಿಗೂ ಗೀತೆ ರಚಿಸಿದ್ದಾರೆ. ಅವರ ಅಂತ್ಯಕ್ರಿಯೆ ಸಂಜೆ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು