ನವದೆಹಲಿ: ನಟ ವಿಕ್ಕಿ ಕೌಶಲ್ ಮುಖ್ಯಪಾತ್ರದಲ್ಲಿ ನಟಿಸಿರುವ ಐತಿಹಾಸಿಕ ಆ್ಯಕ್ಷನ್ ಚಿತ್ರ ‘ಛಾವಾ’ ಬಿಡುಗಡೆಯಾದ ಮೊದಲ ದಿನವೇ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ₹50 ಕೋಟಿ ಗಳಿಸಿದೆ ಎಂದು ಸಿನಿಮಾ ತಯಾರಕರು ತಿಳಿಸಿದ್ದಾರೆ.

ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರವನ್ನು ದಿನೇಶ್ ವಿಜನ್ ತಮ್ಮ ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ನಿರ್ಮಾಣ ಸಂಸ್ಥೆ, ‘ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಜಾಗತಿಕವಾಗಿ ₹50 ಕೋಟಿ ಗಳಿಸಿದೆ. ಐತಿಹಾಸಿಕ ಹಿಂದಿ ಚಿತ್ರವೊಂದಕ್ಕೆ ಇದುವರೆಗಿನ ಅತಿದೊಡ್ಡ ಆರಂಭ ಇದಾಗಿದೆ. ಈಗಲೇ ನಿಮ್ಮ ಟಿಕೆಟ್ಗಳನ್ನು ಬುಕ್ ಮಾಡಿ’ ಎಂದು ಬರೆದುಕೊಂಡಿದೆ.

ಚಿತ್ರದಲ್ಲಿ ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾರಾಣಿ ಯಶುಬಾಯಿಯಾಗಿ ನಟಿ ರಶ್ಮಿಕಾ ಮಂದಣ್ಣ ಮತ್ತು ಜೌರಂಗಜೇಬನಾಗಿ ಅಕ್ಷಯ್ ಖನ್ನಾ ನಟಿಸಿದ್ದಾರೆ.

ನಿನ್ನೆ (ಫೆ. 14) ಪ್ರೇಮಿಗಳ ದಿನದಂದು ‘ಛಾವಾ’ ಚಿತ್ರ ಬಿಡುಗಡೆಯಾಗಿತ್ತು.

ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ನಿನ್ನೆ (ಫೆ.14) ಭೇಟಿ ನೀಡಿದ್ದ ನಟ ವಿಕ್ಕಿ ಕೌಶಲ್ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು.
.ಕುಂಭಮೇಳದಲ್ಲಿ ಭಾಗವಹಿಸಿದ್ದು ನನ್ನ ಅದೃಷ್ಟ: ಸಂಗಮದಲ್ಲಿ ಮಿಂದೆದ್ದ ನಟ ವಿಕ್ಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.