ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾ

ಸೋಮವಾರ, ಮೇ 20, 2019
30 °C

ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾ

Published:
Updated:
Prajavani

ಬಾಲಿವುಡ್‌ನಲ್ಲೀಗ ಬಯೋಪಿಕ್‌ನ ಪರ್ವ. ಒಂದೆಡೆ ರಣವೀರ್ ಸಿಂಗ್ ಕಪಿಲ್ ದೇವ್ ಜೀವನ ಚರಿತ್ರೆ ಆಧಾರಿತ ‘83’ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ಇತ್ತ ವಿದ್ಯಾ ಬಾಲನ್ ‘ಮಾನವ ಕಂಪ್ಯೂಟರ್’ ಎಂದೇ ಖ್ಯಾತರಾಗಿದ್ದ ಕನ್ನಡತಿ ಶಕುಂತಲಾ ದೇವಿ ಅವರ ಬಯೋಪಿಕ್‌ಗೆ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನು ಅನು ಮೆನನ್  ನಿರ್ದೇಶಿಸಲಿದ್ದಾರೆ.

ಶಕುಂತಲಾ ದೇವಿ ಪಾತ್ರದ ಬಗ್ಗೆ ಉತ್ಸುಕರಾಗಿರುವ ವಿದ್ಯಾ ಈಗಾಗಲೇ ತಮ್ಮ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಖ್ಯಾತ ಗಣಿತಜ್ಞೆ, ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಅವರ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಥ್ರಿಲ್ ತಂದಿದ್ದೆ. ಸಣ್ಣ ಊರಿನ ಹುಡುಗಿಯೊಬ್ಬಳು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯಾಗುವ ಕಥೆಯ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಖುಷಿ ತಂದಿದೆ. 2020ರ ವೇಳೆಗೆ ಶಕುಂತಲಾ ದೇವಿಯಾಗಿ ವಿದ್ಯಾಬಾಲನ್ ಥಿಯೇಟರ್‌ನಲ್ಲಿರುತ್ತಾಳೆ’ಎಂದು ಟ್ವೀಟ್ ಮಾಡಿದ್ದಾರೆ. 

ಚಿತ್ರದ ನಿರ್ದೇಶಕಿ ಅನು ಮೆನನ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ನನ್ನ ನೆಚ್ಚಿನ ನಟಿ ವಿದ್ಯಾ ಬಾಲನ್ ಅವರನ್ನು ನಿರ್ದೇಶಿಸಲು ಅವಕಾಶ ಸಿಕ್ಕಿರುವುದು ಅದ್ಭುತವಾದ ಸಂಗತಿ. ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಿರ್ಮಾಪಕ ವಿಕ್ರಮ್ ಅವರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ’ಎಂದು ಬರೆದುಕೊಂಡಿದ್ದಾರೆ.

ನಟಿ ಸಿಲ್ಕ್ ಸ್ಮಿತಾ ಜೀವನ ಚರಿತ್ರೆ ಆಧರಿಸಿದ ‘ಡರ್ಟಿ ಪಿಕ್ಚರ್’ನಲ್ಲಿ ವಿದ್ಯಾ, ಸಿಲ್ಕ್ ಸ್ಮಿತಾ ಪಾತ್ರ ಮಾಡಿ ಜನಪ್ರಿಯತೆ ಗಳಿಸಿದ್ದರು. ಈಗ ಶಕುಂತಲಾ ದೇವಿ ಪಾತ್ರಕ್ಕೆ ವಿದ್ಯಾ ಜೀವ ತುಂಬುತ್ತಿರುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

‘ಬೆಳ್ಳಿತೆರೆಯಲ್ಲಿ ಶಕುಂತಲಾ ದೇವಿ ಪಾತ್ರದಲ್ಲಿ ಅಭಿನಯಿಸುವ ಬಗ್ಗೆ ಕಾತರಳಾಗಿದ್ದೇನೆ. ಸ್ತ್ರೀವಾದದ ಪ್ರಬಲ ದನಿಯಾಗಿದ್ದ ಶಕುಂತಲಾ ಅವರು ತಮ್ಮ ಸಾಧನೆ ಮತ್ತು ತಾಳ್ಮೆಯ ಬಲದಿಂದ ಅತ್ಯುನ್ನತ ಸ್ಥಾನ ಗಳಿಸಿದ್ದರು’ಎಂದು ವಿದ್ಯಾಬಾಲನ್ ಹೇಳಿದ್ದಾರೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !