ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ದೇವರಕೊಂಡ ನಟನೆಯ ‘ದಿ ಫ್ಯಾಮಿಲಿ ಸ್ಟಾರ್‌’ ಒಟಿಟಿಗೆ

Published 24 ಏಪ್ರಿಲ್ 2024, 13:12 IST
Last Updated 24 ಏಪ್ರಿಲ್ 2024, 13:12 IST
ಅಕ್ಷರ ಗಾತ್ರ

ಮುಂಬೈ: ವಿಜಯ್ ದೇವರಕೊಂಡ, ಮೃಣಾಲ್‌ ಠಾಕೂರ್‌ ನಟನೆಯ ತೆಲುಗಿನನ ‘ದಿ ಫ್ಯಾಮಿಲಿ ಸ್ಟಾರ್‌’ ಚಿತ್ರ ಒಟಿಟಿಗೆ ಬರುತ್ತದೆ. ಇದೇ 26ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಅಮೇಜಾನ್‌ ಪ್ರೈಮ್‌ ವಿಡಿಯೊ ಬುಧವಾರ ಹೇಳಿದೆ.

ಪರಶುರಾಮ್‌ ಅವರು ಬರೆದು ನಿರ್ದೇಶಿಸಿರುವ ‘ದಿ ಫ್ಯಾಮಿಲಿ ಸ್ಟಾರ್‌’ ಸಿನಿಮಾ ಏ.5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು.

ಈ ಚಿತ್ರ ಪ್ರೈಮ್‌ ವಿಡಿಯೊದಲ್ಲಿ ಭಾರತವೂ ಸೇರಿದಂತೆ 240 ದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ಡಬ್ಬಿಂಗ್‌ ಆಗಿ ಬಿಡುಗಡೆಗೊಳ್ಳಲಿದೆ ಎಂದು ಪ್ರೈಮ್‌ ವಿಡಿಯೊ ಹೇಳಿದೆ.

ವಿಜಯ್‌ ದೇವರಕೊಂಡ ಅವರ ಲೈಗರ್‌, ಖುಷಿ ಚಿತ್ರಗಳು ನಿರೀಕ್ಷೆಯಷ್ಟು ಯಶಸ್ಸು ಕಾಣಲಿಲ್ಲ. ಈಗ ಫ್ಯಾಮಿಲಿ ಸ್ಟಾರ್‌ ಚಿತ್ರ ಕೂಡ ಚಿತ್ರಮಂದಿಗಳಲ್ಲಿ ಹೆಚ್ಚು ಸುದ್ದಿ ಮಾಡಲಿಲ್ಲ. ಇದೀಗ ಸಿನಿಮಾ ಬಿಡುಗಡೆಯಾಗಿ 20 ದಿನದ ಅಂತರದಲ್ಲೇ ಒಟಿಟಿಗೆ ಬರಲು ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT