ಹೈದರಾಬಾದ್: ಗೌತಮ್ ತಿನ್ನನುರಿ ನಿರ್ದೇಶನದ, ನಟ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕಿಂಗ್ಡಮ್' ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

'ಕಿಂಗ್ಡಮ್' ಚಿತ್ರ ಜುಲೈ 4ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಹಿಂದೆ ಮೇ 30ಕ್ಕೆ ಚಿತ್ರ ಬಿಡುಗಡೆ ದಿನಾಂಕ ನಿಗದಿಯಾಗಿತ್ತು.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯ್ ದೇವರಕೊಂಡ, ಪ್ರಸ್ತುತ ದೇಶದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರದ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. ಚಿತ್ರತಂಡ ಈ ಹಿಂದೆ ಹೇಳಿದ್ದ ದಿನಾಂಕದಂದೇ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗಳಿಂದ ದಿನಾಂಕವನ್ನು ಮುಂದೂಡಬೇಕಾಯಿತು ಎಂದು ಹೇಳಿದ್ದಾರೆ.
.ಕರ್ನಲ್ ಸೋಫಿಯಾ ಖುರೇಷಿ ಕುರಿತಾದ MP ಸಚಿವ ವಿಜಯ್ ಶಾ ಹೇಳಿಕೆ ವಿವಾದ: NCW ಖಂಡನೆ.ಜನ್ಮದಿನ ಆಚರಿಸದಿರಲು ನಿರ್ಧಾರ: ಸಂಭ್ರಮಾಚರಣೆ ಬೇಡ; ಅಭಿಮಾನಿಗಳಲ್ಲಿ ಡಿಕೆಶಿ ಮನವಿ.
ಚಿತ್ರದ ಪ್ರಚಾರಗಳಿಗೂ ಸಮಯಬೇಕಾಗಿದ್ದು, ಜುಲೈ 4ರಂದು ಸಿನಿಮಾ ಮಂದಿರಗಳಲ್ಲಿ ನಿಮ್ಮನ್ನು ನೋಡಲು ಇಚ್ಛಿಸುತ್ತೇವೆ. ನಿಮ್ಮ ಆಶೀರ್ವಾದ ಚಿತ್ರದ ಮೇಲಿರಲಿದೆ ಎಂದು ಆಶಿಸುತ್ತೇವೆ ಎಂದು ದೇವರಕೊಂಡ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಸಿತಾರಾ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಈ ಚಿತ್ರವನ್ನು ನಿರ್ಮಿಸಿವೆ.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.
.ಮಣಿಪುರ | ನಿಷೇಧಿತ ಸಂಘಟನೆಯ 12 ಉಗ್ರರ ಬಂಧನ; ಶಸ್ತ್ರಾಸ್ತ್ರ, ಮದ್ದುಗುಂಡು ವಶ.ಪಾಕ್ ಜೊತೆ ಟರ್ಕಿ ನಂಟು|ಸಂಪೂರ್ಣ ನಿರ್ಬಂಧ ವಿಧಿಸಿ: ಆರ್ಎಸ್ಎಸ್ ಅಂಗಸಂಸ್ಥೆ .ದೇಶದ್ರೋಹದ ಹೇಳಿಕೆ ಆರೋಪ: ಕೇರಳದ ಕಿರುತೆರೆ ನಟನ ವಿರುದ್ಧ ಪ್ರಕರಣ.ಅತ್ಯಾಚಾರ ಎಸಗಿ ಮೂಕ ಬಾಲಕಿ ಕೊಲೆ ಆರೋಪ: ಮನೆಮುಂದೆ ಶವವಿಟ್ಟು ಕುಟುಂಬದವರ ಆಕ್ರಂದನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.