ಮಂಗಳವಾರ, ಸೆಪ್ಟೆಂಬರ್ 28, 2021
24 °C

ವಿಜಯ್ ದೇವರಕೊಂಡ ಹೊಸ ಸಿನಿಮಾ ಕೆಲಸ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖ್ಯಾತ ನಟ ವಿಜಯ್ ದೇವರಕೊಂಡ ಅವರು ತಮ್ಮ ಮುಂದಿನ ಚಿತ್ರದ ಚಿತ್ರೀಕರಣವನ್ನು ಸೋಮವಾರ ಆರಂಭಿಸಿದ್ದಾರೆ. ಈ ಚಿತ್ರವನ್ನು ಪುರಿ ಜಗನ್ನಾಥ್ ಅವರು ನಿರ್ದೇಶಿಸುತ್ತಿದ್ದಾರೆ.

ಬಾಲಿವುಡ್‌ನ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಯಾದ ಧರ್ಮ ಪ್ರೊಡಕ್ಷನ್ಸ್‌ನ ಕರಣ್ ಜೋಹರ್ ಮತ್ತು ಅಪೂರ್ವಾ ಮೆಹ್ತಾ ಅವರು ಈ ಚಿತ್ರದ ನಿರ್ಮಾಣ ಪಾಲುದಾರರಾಗಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ.

ಈ ಸಿನಿಮಾ ದೇಶವ್ಯಾ‍ಪಿ ಬಿಡುಗಡೆ ಆಗಲಿದೆ. ಇದನ್ನು ಹಿಂದಿ ಮತ್ತು ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಿನಿತಂಡ ಹೇಳಿದೆ.

‘ಅರ್ಜುನ್ ರೆಡ್ಡಿ’, ‘ಡಿಯರ್ ಕಾಮ್ರೇಡ್’ ವಿಜಯ್ ಅವರ ತೀರಾ ಈಚೆಗಿನ ಚಿತ್ರಗಳು. ಹೊಸ ಚಿತ್ರಕ್ಕಾಗಿ ವಿಜಯ್ ಅವರು ಕಠಿಣ ತರಬೇತಿ ಪಡೆದಿದ್ದಾರೆ. ಅಲ್ಲದೆ, ಮಾರ್ಷಿಯಲ್ ಆರ್ಟ್ಸ್‌ ಮತ್ತು ಇತರ ಕೆಲವು ಸಮರಕಲೆಗಳನ್ನು ಕಲಿಯಲು ಅವರು ಥೈಲೆಂಡ್‌ಗೆ ಕೂಡ ಹೋಗಿಬಂದಿದ್ದಾರೆ.

ರಮ್ಯಾ ಕೃಷ್ಣನ್, ರೋನಿತ್ ರಾಯ್, ವಿಷ್ಣು ರೆಡ್ಡಿ, ಆಲಿ ಮತ್ತು ಗೆಟಪ್ ಶ್ರೀನು ಅವರು ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು