ಶುಕ್ರವಾರ, ಏಪ್ರಿಲ್ 16, 2021
31 °C

ಖಡ್ಗದಿಂದ ಕೇಕ್‌ ಕತ್ತರಿಸಿದ್ದ ತಮಿಳು ನಟ ವಿಜಯ್‌ ಸೇತುಪತಿ ಕ್ಷಮೆಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖಡ್ಗದಿಂದ ಹುಟ್ಟುಹಬ್ಬದ ಕೇಕ್‌ ಕತ್ತರಿಸಿ ವಿವಾದಕ್ಕೊಳಗಾಗಿದ್ದ ತಮಿಳುನಟ ವಿಜಯ್‌ ಸೇತುಪತಿ ಬೇಷರತ್‌ ಆಗಿ ಕ್ಷಮೆಯಾಚಿಸಿದ್ದಾರೆ. ಸೇತುಪತಿ ಅವರು ಖಡ್ಗದಿಂದ ಕೇಕ್‌ ಕತ್ತರಿಸಿದ ದೃಶ್ಯಗಳು ವೈರಲ್‌ ಆಗುತ್ತಿದ್ದಂತೆಯೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಪೊಲೀಸರೂ ಕ್ರಮ ಕೈಗೊಳ್ಳಲು ಮುಂದಾಗಿದ್ದರು. 

ಪೊನ್‌ ರಾಮ್‌ ಅವರ ಹೊಸ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ ವಿಜಯ್‌ ಈಗ ಘಟನೆಗೆ ಕ್ಷಮೆಯಾಚಿಸುವ ಮೂಲಕ ತೆರೆಯೆಳೆಯಲು ಮುಂದಾಗಿದ್ದಾರೆ.

‘ನಾನು ಉದ್ದೇಶಪೂರ್ವಕವಾಗಿ ಖಡ್ಗದಿಂದ ಕೇಕ್‌ ಕತ್ತರಿಸಲಿಲ್ಲ. ಅದು ಚಿತ್ರದ ಭಾಗವಾಗಿತ್ತು. ಮುಂದೆ ಇಂಥ ಘಟನೆಗಳಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಹೇಳಿದ್ದಾರೆ.

ಸೇತುಪತಿ ಅವರು ಕಾನೂನು ಕ್ರಮದ ಭೀತಿಯನ್ನೂ ಎದುರಿಸುತ್ತಿದ್ದರು. ಕಾಲಿವುಡ್‌ನಲ್ಲಿ ಖಳಪಾತ್ರಗಳ ಮೂಲಕ ಮಿಂಚಿದವರು ಸೇತುಪತಿ. ಇತ್ತೀಚೆಗೆ ಬಿಡುಗಡೆ ಆದ ವಿಜಯ್‌ ಅವರ ‘ಮಾಸ್ಟರ್’ ಚಿತ್ರದಲ್ಲಿ ಕ್ರೂರಿ ಖಳನಾಯಕ ‘ಭವಾನಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು