‘ಕೆಂಡಸಂಪಿಗೆ’ ಸಿನಿಮಾ ಖ್ಯಾತಿಯ ವಿಕ್ಕಿ ವರುಣ್ ಕೊನೆಯದಾಗಿ ತೆರೆ ಮೇಲೆ ಕಾಣಿಸಿದ್ದು ‘ಕಾಲೇಜುಕುಮಾರ’ ಚಿತ್ರದಲ್ಲಿ. ಈಗ ಮತ್ತೆ ತೆರೆ ಮೇಲೆ ಕಮಾಲ್ ಮಾಡಲು ರೆಡಿ ಆಗಿದ್ದಾರೆ. ಅವರ ಮುಂದಿನ ಸಿನಿಮಾ ‘ಕಾಲಾ ಪತ್ಥರ್’. ಈ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು ಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ ವಿಕ್ಕಿ. ಈ ಚಿತ್ರಕ್ಕೆ ಚೇತನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇವರು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಸಹಾಯಕ ನಿರ್ದೇಶಕರಾಗಿದ್ದರು. ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್ ಈ ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದಾರೆ.

80–90ರ ದಶಕದಲ್ಲಿ ಬೆಂಗಳೂರಿನಲ್ಲಿ ಕಾಲಾ ಪತ್ಥರ್ ಎಂಬ ಗ್ಯಾಂಗ್ಸ್ಟರ್ ಇದ್ದ. ವಿಕ್ಕಿ ಲುಕ್ ಕೂಡ ಹಾಗೇ ಇದ್ದು ಈ ಚಿತ್ರ ರೌಡಿಸಂ ಹಿನ್ನೆಲೆಯುಳ್ಳ ಸಿನಿಮಾ ಇರಬಹುದು ಎನ್ನುತ್ತಿವೆ ಮೂಲಗಳು.

ಸಿನಿಮಾ ಕುರಿತು ಮಾತನಾಡಿರುವ ವಿಕ್ಕಿ ‘ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಕಾಲಾ ಪತ್ಥರ್ ಎಂಬ ಸಿನಿಮಾ ಮಾಡಿದ್ದರು. ರೆಬಲ್ ಸ್ಟಾರ್ ಅಂಬರೀಷ್ ಆ ಸಿನಿಮಾವನ್ನು ರಿಮೇಕ್ ಮಾಡಬೇಕು ಎಂದುಕೊಂಡಿದ್ದರು. ಆ ಸಿನಿಮಾದ ಶೀರ್ಷಿಕೆಯನ್ನು ಕೂಡ ನೋಂದಾಯಿಸಿದ್ದರು. ಆದರೆ ಸಿನಿಮಾ ಮಾಡಿರಲಿಲ್ಲ. ನಾವು ಈ ಸಿನಿಮಾ ಶೀರ್ಷಿಕೆಯನ್ನಷ್ಟೇ ತೆಗೆದುಕೊಂಡಿದ್ದೇವೆ. ಇದರಲ್ಲಿ ನಾನು ನನ್ನ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದೇನೆ. ಸಿನಿಮಾ ಕಳೆದ ವರ್ಷವೇ ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಆರಂಭಿಸಲು ಸಾಧ್ಯವಾಗಿರಲಿಲ್ಲ. ಫೆಬ್ರುವರಿಯಿಂದ ಶೂಟಿಂಗ್ ಆರಂಭವಾಗಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.