ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ನಟ ವಿಕ್ರಮ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು– ವರದಿ

ಅಕ್ಷರ ಗಾತ್ರ

ಚೆನ್ನೈ: ತಮಿಳಿನ ಖ್ಯಾತ ನಟ ವಿಕ್ರಮ್ ಅನಾರೋಗ್ಯಪೀಡಿತರಾಗಿದ್ದು, ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಪೊನ್ನಿಯಿನ್ ಸೆಲ್ವನ್’ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಲ ಸಮಯದ ಬಳಿಕ ನಟನಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಹಾಗಾಗಿ, ಆಸ್ಪತ್ರೆಗೆ ದಾಖಲಾಗಿದ್ದಾದೆ. ಸದ್ಯ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಆದರೆ, ಅವರಿಗೆ ಹೃದಯಾಘಾತವಾಗಿದೆ ಎಂದು ಕೆಲ ವರದಿಗಳು ಹೇಳುತ್ತಿರುವುದಾಗಿ ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ. ಆದರೆ, ಹೃದಯಾಘಾತದ ವರದಿಗಳನ್ನು ಚಿತ್ರತಂಡ ಅಲ್ಲಗಳೆದಿದೆ.

ವಿಕ್ರಮ್ ಈ ವರ್ಷ ಎರಡು ಚಿತ್ರಗಳ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಬಹಳ ತಡವಾಗಿರುವ ಅಜಯ್ ಜ್ಞಾನಮೂರ್ತಿ ನಿರ್ದೇಶನದ ಕೋಬ್ರಾ ಇದೇ ಆಗಸ್ಟ್ 11ಕ್ಕೆ ತೆರೆ ಕಾಣುತ್ತಿದ್ದು, ಮಣಿರತ್ನಂ ನಿರ್ದೆಶನದ ‘ಪೊನ್ನಿಯಿನ್ ಸೆಲ್ವನ್’ಸೆಪ್ಟೆಂಬರ್ 30ಕ್ಕೆ ಬಿಡುಗಡೆ ಆಗಲಿದೆ.

ಇದರ ಜೊತೆಗೆ ಇದೇ ಮೊದಲ ಬಾರಿಗೆ ಪಾ ರಂಜಿತ್ ನಿರ್ದೆಶನದ ಸಿನಿಮಾದಲ್ಲೂ ವಿಕ್ರಮ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಿರ್ಮಾಪಕ ಜ್ಞಾನ ವೆಲ್ ರಾಜ ಈ ಮಾಹಿತಿ ಬಹಿರಂಗಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT