ಮಂಗಳವಾರ, ಆಗಸ್ಟ್ 3, 2021
28 °C

‘ವರದ’ ನಾಗಿ ಬರುತ್ತಿದ್ದಾರೆ ವಿನೋದ್ ಪ್ರಭಾಕರ್..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿನೋದ್‌ ಪ್ರಭಾಕರ್‌ ‘ವರದ’ ಆಗಿ ಬರುತ್ತಿದ್ದಾರೆ. ಚಿತ್ರದ ಮೋಷನ್‌ ಪೋಸ್ಟರ್‌ ಈಗಾಗಲೇ ಆನಂದ್‌ ಆಡಿಯೊದ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ.

‘ತಂದೆ ಮಗನ ಬಾಂಧವ್ಯದ ಬಗ್ಗೆ ಹೇಳುವ ಸಿನಿಮಾ ‘ವರದ’. ತಂದೆಯ ಪಾತ್ರದಲ್ಲಿ ಚರಣ್‌ರಾಜ್‌ ಇದ್ದಾರೆ. ನಾಯಕಿಯಾಗಿ ಅಮಿತಾ ಇದ್ದಾರೆ. ತಾಯಿ ಪಾತ್ರದಲ್ಲಿ ಅಶ್ವಿನಿ ಗೌಡ ಇದ್ದಾರೆ’ ಎಂದರು ವಿನೋದ್‌ ಪ್ರಭಾಕರ್‌. 

ನಿರ್ಮಾಪಕ ಹಾಗೂ ನಿರ್ದೇಶಕ ಉದಯ ಪ್ರಕಾಶ್ ಮಾಹಿತಿ ನೀಡಿ, ‘ಈ ಚಿತ್ರ ಎರಡು ವರ್ಷಗಳ ಹಿಂದೆ ಆರಂಭವಾಯಿತು. ಆದರೆ, ಕೊರೊನಾ ಕಾರಣದಿಂದ ತಡವಾಯಿತು. ಈಗಾಗಲೇ ಚಿತ್ರೀಕರಣ ಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ’ ಎಂದರು.

ಚಿತ್ರಕ್ಕೆ ಪ್ರದೀಪ್ ವರ್ಮ ಅವರ ಸಂಗೀತ ಹಾಗೂ ಜೈಆನಂದ್ ಅವರ ಛಾಯಾಗ್ರಹಣ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು