ಶನಿವಾರ, ಜನವರಿ 22, 2022
16 °C

‘ಮೈ ರಾಕ್’ ಎಂದು ಅನುಷ್ಕಾ ಜತೆಗಿನ ಸೆಲ್ಫಿ ಪೋಸ್ಟ್ ಮಾಡಿದ ವಿರಾಟ್ ಕೊಹ್ಲಿ!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Virat Kohli Instagram Post

ಬೆಂಗಳೂರು: ಕ್ರಿಕೆಟಿಗ ವಿರಾಟ್ ಕೊಹ್ಲಿ– ಅನುಷ್ಕಾ ಶರ್ಮಾ ದಂಪತಿ ದೇಶದ ಪ್ರಮುಖ ಸೆಲೆಬ್ರಿಟಿ ದಂಪತಿಯೂ ಹೌದು..

ಕೊಹ್ಲಿ-ಅನುಷ್ಕಾ ದಂಪತಿ ಹಲವು ಸಂದರ್ಭದಲ್ಲಿ ಜಾಹೀರಾತುಗಳಲ್ಲೂ ಜತೆಯಾಗಿ ಕಾಣಿಸಿಕೊಂಡಿದ್ದಾರೆ.

ವಿದೇಶದಲ್ಲಿ ನಡೆಯುವ ಕ್ರಿಕೆಟ್ ಸರಣಿ ಸಂರ್ಭದಲ್ಲಿ ಕೊಹ್ಲಿ ಜತೆಗೆ ಅನುಷ್ಕಾ ತೆರಳುತ್ತಾರೆ. ಅಲ್ಲದೆ, ಸಾಮಾಜಿಕ ತಾಣದಲ್ಲೂ ಕೊಹ್ಲಿ-ಅನುಷ್ಕಾ ದಂಪತಿ ಸಕ್ರಿಯವಾಗಿದ್ದು, ಸದಾ ವಿವಿಧ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ.

ಅಲ್ಲದೆ, ಮಗಳು ಜನಿಸಿದ ಬಳಿಕ ಅನುಷ್ಕಾ ಅವರು ಸಾರ್ವಜನಿಕ ಸಮಾರಂಭ ಮತ್ತು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಕುಟುಂಬದ ಜತೆಗೆ ಅವರು ಹೆಚ್ಚಿನ ಸಮಯ ಕಳೆಯುತ್ತಾರೆ.

ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಜತೆಗೆ ಸೆಲ್ಪಿ ಒಂದನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅನುಷ್ಕಾ ಶರ್ಮಾರನ್ನು ಕೊಹ್ಲಿ ‘ಮೈ ರಾಕ್’ ಎಂದು ಕರೆದಿದ್ದಾರೆ. ಈ ಫೋಟೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ 40 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು