ನವದೆಹಲಿ: ಬಾಲಿವುಡ್ ನಟ ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ಅಭಿನಯದ 'ವಾರ್ 2' ಸಿನಿಮಾವು ಬಿಡುಗಡೆಯಾದ ಎರಡೇ ದಿನದಲ್ಲಿ ಬರೋಬ್ಬರಿ ₹100 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಆಗಸ್ಟ್ 14ರಂದು ಬಿಡುಗಡೆಯಾಗಿದ್ದ 'ವಾರ್ 2' ಸಿನಿಮಾವು ದೇಶಿಯ ಬಾಕ್ಸ್ ಆಫೀಸ್ನಲ್ಲಿ ₹109.35 ಕೋಟಿ ಗಳಿಸಿದೆ ಎಂದು ತಿಳಿದು ಬಂದಿದೆ.

ಟ್ರೇಡ್ ಟ್ರ್ಯಾಕಿಂಗ್ ವೆಬ್ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, 'ವಾರ್ 2' ಮೊದಲ ದಿನವೇ ₹52 ಕೋಟಿ ಗಳಿಸಿತ್ತು. ಮರುದಿನ ₹57.35 ಕೋಟಿ ಗಳಿಸಿತ್ತು, ಅದರಲ್ಲಿ ₹44.5 ಕೋಟಿ ಹಿಂದಿ ಆವೃತ್ತಿಯಿಂದ ಬಂದಿದ್ದು, ತಮಿಳು ಮತ್ತು ತೆಲುಗು ಆವೃತ್ತಿಗಳಿಂದ ₹12 ಕೋಟಿಗೂ ಹೆಚ್ಚು ಗಳಿಸಿದೆ ಎಂದು ಹೇಳಿದೆ.
.ತಾಯಿಯ ಮೇಲೆಯೇ ಎರಡೆರಡು ಬಾರಿ ಅತ್ಯಾಚಾರ: ಪಾಪಿ ಪುತ್ರನ ಹೀನ ಕೃತ್ಯ.ಧರ್ಮಸ್ಥಳ ಪ್ರಕರಣದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿದೆ: ಆರ್. ಅಶೋಕ.
ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈ ಸಂಬಂಧ ನಟ ಜೂನಿಯರ್ ಎನ್ಟಿಆರ್, ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

'ನನ್ನ ಅತ್ಯಂತ ಪ್ರೀತಿಯ ಪಾತ್ರಗಳಲ್ಲಿ ಕಬೀರ್ ಸಹ ಒಂದೂ, ಈ ಅದ್ಭುತ ಪಾತ್ರ ಹಾಗೂ ಚಿತ್ರಕ್ಕಾಗಿ ಧನ್ಯವಾದಗಳು' ಎಂದು ಹೃತಿಕ್ ರೋಷನ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
.GST Reforms: ಜಾರಿಗೆ ಸಹಕರಿಸಲು ರಾಜ್ಯಗಳಿಗೆ ಪ್ರಧಾನಿ ಮೋದಿ ಮನವಿ.ದೆಹಲಿ: ₹11,000 ಕೋಟಿ ವೆಚ್ಚದ ಎರಡು ಪ್ರಮುಖ ಹೆದ್ದಾರಿ ಯೋಜನೆ ಉದ್ಘಾಟಿಸಿದ ಮೋದಿ.
'ವಾರ್–2 ಸಿನಿಮಾದ ಮೇಲಿನ ನಿಮ್ಮ ಪ್ರೀತಿಯನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ. ಇಷ್ಟಪಟ್ಟು ಮಾಡಿದ ಸಿನಿಮಾದ ಮೇಲೆ ನಿಮ್ಮ ಒಲವು ಖುಷಿ ತಂದಿದೆ' ನಟ ಜೂನಿಯರ್ ಎನ್ಟಿಆರ್ ಎಂದು ತಿಳಿಸಿದ್ದಾರೆ.

'ಚಿತ್ರಕ್ಕೆ ನೀವು ತೋರುತ್ತಿರುವ ಪ್ರೀತಿ ಕಂಡು ಆನಂದವಾಗಿದೆ. ಚಿತ್ರಮಂದಿರಗಳಲ್ಲಿ ಚಿತ್ರದ ಮೇಲಿನ ಪ್ರೀತಿ ಹರ್ಷೋದ್ಗಾರಗಳ ಮೂಲಕ ಕೇಳಿಸುತ್ತಿದೆ' ಎಂದು ಕಿಯಾರಾ ಅಡ್ವಾಣಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
.ಬಿಜೆಪಿ ಅಧಿಕಾರದಲ್ಲಿರುವವರೆಗೆ ಜನರ ಹಕ್ಕು, ಸಂವಿಧಾನ ಸುರಕ್ಷಿತವಲ್ಲ; ಖರ್ಗೆ.ದೇಶದಾದ್ಯಂತ ವಿಧಾನಸಭೆ–ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ: ರಾಹುಲ್.
ಈ ಚಿತ್ರಕ್ಕೆ ಅಯಾನ್ ಮುಖರ್ಜಿ ಆ್ಯಕ್ಷನ್ ಕಟ್ ಹೇಳಿದ್ದಾರೆ. 2019ರಲ್ಲಿ ಬಿಡುಗಡೆಯಾದ ವಾರ್–1 ಚಿತ್ರದ ಮುಂದುವರಿದ ಭಾಗ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.