ಸೋಮವಾರ, ಅಕ್ಟೋಬರ್ 18, 2021
25 °C

ಸಂಬಂಧ ಗಟ್ಟಿಯಾಗಿರಬೇಕಾದರೆ, ಪ್ರಾಮಾಣಿಕತೆ ಬೇಕು: ಅನುಷಾ ದಾಂಡೇಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೂಪದರ್ಶಿ ಹಾಗೂ ಬಾಲಿವುಡ್‌ ನಟಿ ಅನುಷಾ ದಾಂಡೇಕರ್‌ ತಮ್ಮ ಮಾಜಿ ಗೆಳೆಯ ಕರಣ್‌ ಕುಂದ್ರಾ ಅವರೊಂದಿಗಿನ ಸಂಬಂಧ ಮುರಿದುಬೀಳಲು ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ. 

ಅನುಷಾ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಬಂದಿದ್ದರು. ಅಭಿಮಾನಿಗಳಿಗೆ  ಏನು ಬೇಕಾದರೂ ಕೇಳಿ ಎಂದಿದ್ದರು. ಅವರ ಮುಂದಿನ ಸಿನಿಮಾಗಳು, ಯೋಜನೆಗಳ ಬಗ್ಗೆ ಹಲವರು ಪ್ರಶ್ನೆ ಕೇಳಿದ್ದರು. 

ಒಬ್ಬ ಅಭಿಮಾನಿ ಮಾತ್ರ ಒಂದು ಪ್ರಶ್ನೆ ಕೇಳಿದ್ದರು. ’ನಿಮ್ಮಮತ್ತು ಕರಣ್‌ ಸಂಬಂಧ ಮುರಿದುಬಿಳಲು ಕಾರಣ ಏನು? ನೇರವಾಗಿ ಉತ್ತರಿಸಿ’ ಎಂದು ಕೇಳಿದ್ದರು. 

’ನಾವು ಹೆಚ್ಚು ಪ್ರಾಮಾಣಿಕತೆ, ಸಂತೋಷ, ಪ್ರೀತಿಯಿಂದ ಇರಬೇಕು, ಆಗ ನಮ್ಮಲ್ಲಿ ಆತ್ಮಪ್ರೇಮ ಶುರುವಾಗುತ್ತೆ, ಈ ಕಾರಣಕ್ಕೆ ಆ ನಿರ್ಧಾರ ತೆಗೆದುಕೊಂಡೆ’ ಎಂದು ಅವರು ಉತ್ತರಿಸಿದ್ದಾರೆ. 

’ಸಂಬಂಧ ಗಟ್ಟಿಯಾಗಿರಬೇಕಾದರೆ ಮೊದಲು ನಾವು ಪ್ರಾಮಾಣಿಕರಾಗಿರಬೇಕು’ ಎಂದು ಮತ್ತೊಂದು ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ ’ಬಾಲಿವುಡ್‌ ಹಂಗಾಮಾ’ ಸುದ್ದಿತಾಣ ವರದಿ ಮಾಡಿದೆ. 

ಅನುಷಾ, ಕರಣ್‌ ಕುಂದ್ರಾ ಜೊತೆ ಸಂಬಂಧ ಕಡಿದುಕೊಂಡ ಮೇಲೆ ಜೆಸನ್‌ ಷಾ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಜೇಸನ್‌ ಷಾ ಅವರ ಫೋಟೊಗಳನ್ನು ಡಿಲೀಟ್‌ ಮಾಡಿದ್ದರು. ಷಾ ಜೊತೆಗಿನ ಸಂಬಂಧವನ್ನು ಅನುಷಾ ಕಡಿದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು