ಸೋಮವಾರ, ಸೆಪ್ಟೆಂಬರ್ 20, 2021
21 °C

ಜ್ಯೂನಿಯರ್‌ ಚಿರುಗೆ ಸ್ವಾಗತ ಕೋರಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬ ಆಚರಿಸಿದ ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

chiru sarja

ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬವನ್ನು ಒಂದು ದಿನ ಮುಂಚಿತವಾಗಿಯೇ ಅವರ ಕುಟುಂಬ ಆಚರಿಸಿದೆ. ಚಿರು ಅವರ ಗರ್ಭಿಣಿ ಪತ್ನಿ ಮೇಘನಾ ಅವರು ಚಿರು ಭಾವಚಿತ್ರದ ಮುಂದೆ ಕೇಕ್‌ ಕತ್ತರಿಸುವ ಸುಂದರ ದೃಶ್ಯ ವಿಡಿಯೋದಲ್ಲಿದೆ. 

ಇಲ್ಲಿ ಹ್ಯಾಪಿ ಬರ್ತ್‌ಡೇ ಟೂಯೂ ಅನ್ನುವುದಿಲ್ಲ. ಬದಲಾಗಿ ಮೇಘನಾ ಹೊಟ್ಟೆಯಲ್ಲಿರುವ ಚಿರು ಮಗುವಿಗೆ ಹಾರ್ಟಿ ವೆಲ್ಕಂ ಟೂ ಯೂ ಜ್ಯೂನಿಯರ್‌ ಚಿರು  (ಕಿರಿಯ ಚಿರುಗೆ ಹೃದಯಪೂರ್ವಕ ಸ್ವಾಗತ) ಎಂದು ಹಾಡುತ್ತಾ ಕೇಕ್‌ ಕತ್ತರಿಸಿದ್ದಾರೆ. 

‘ನಮ್ಮ ಕುಟುಂಬ ಇದುವರೆಗೆ ಅನುಭವಿಸಿದ ನೋವು, ದುಃಖ ಮರೆಯಾಗಬೇಕು. ನಕಾರಾತ್ಮಕ ವಿಷಯಗಳೆಲ್ಲ ದೂರವಾಗಬೇಕು. ಹೊಸ ನಗುವಿನೊಂದಿಗೆ ಜ್ಯೂನಿಯರ್‌ ಚಿರು ನಮ್ಮ ಕುಟುಂಬಕ್ಕೆ ಸೇರಬೇಕುʼ ಎಂದು ಚಿರು ಅವರ ಸೋದರ ಮಾವ, ನಟ ಅರ್ಜುನ್‌ ಸರ್ಜಾ ಸಮಾರಂಭದಲ್ಲಿ ಪುಟ್ಟ ವಿವರಣೆ ಕೊಟ್ಟರು.

ಚಿರು ಸಹೋದರ ದ್ರುವ ಸರ್ಜಾ ಸೇರಿದಂತೆ ಕುಟುಂಬದ ಹಿರಿಯರು, ಆಪ್ತರು ಈ ಪುಟ್ಟ ಸಮಾರಂಭದಲ್ಲಿ ಸೇರಿ ಖುಷಿ ಅನುಭವಿಸಿದರು. 5.31 ನಿಮಿಷಗಳ ವಿಡಿಯೋವನ್ನು ದ್ರುವ ಸರ್ಜಾ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹರಿಯಬಿಟ್ಟಿದ್ದಾರೆ. ವಿಡಿಯೋ ಬಿಟ್ಟ ಮೂರು ಗಂಟೆ ಅವಧಿಯಲ್ಲಿ 432,588 ಜನ ಅದನ್ನು ವೀಕ್ಷಿಸಿದ್ದಾರೆ. 59,267 ಜನ ಇಷ್ಟಪಟ್ಟಿದ್ದಾರೆ.

ಸಮಾರಂಭದ ವೈಭವ, ಕಲಾತ್ಮಕತೆ ವಿಡಿಯೋದಲ್ಲಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು