ಶುಕ್ರವಾರ, ಮಾರ್ಚ್ 31, 2023
22 °C

ಶಾರುಖ್‌ – ದೀಪಿಕಾ ಅಭಿನಯದ ಪಠಾಣ್ ಚಿತ್ರದ ಬಗ್ಗೆ ಕಂಗನಾ ರನೌತ್‌ ಹೇಳಿದ್ದೇನು?

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್, ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರದ ಬಗ್ಗೆ ಕಂಗನಾ ರನೌತ್‌ ಪ್ರತಿಕ್ರಿಯಿಸಿದ್ದಾರೆ.

ಚಿತ್ರದ ಕುರಿತು ಟ್ವೀಟ್ ಮಾಡಿರುವ ಅವರು, ‘ಪಠಾಣ್' ಚಿತ್ರವನ್ನು 'ಇಂಡಿಯನ್ ಪಠಾಣ್' ಎಂದು ಮರುನಾಮಕರಣ ಮಾಡುವಂತೆ ಸೂಚಿಸಿದ್ದಾರೆ.

ಭಾರತೀಯ ಮುಸ್ಲಿಮರು ದೇಶಭಕ್ತರು. ಅಫ್ಗಾನಿಸ್ತಾನಿ ಪಠಾಣ್‌ಗಳಿಗಿಂತ ಭಿನ್ನವಾಗಿದ್ದಾರೆ. ಭಾರತವು ಎಂದಿಗೂ ಅಫ್ಘಾನಿಸ್ತಾನವಾಗುವುದಿಲ್ಲ. ಆ ದೇಶದಲ್ಲಿ ಏನಾಗುತ್ತಿದೆ ಎಂದು ನಮಗೆ ತಿಳಿದಿದೆ. ಅಲ್ಲಿ ನರಕವನ್ನು ಮೀರಿದೆ, ಆದ್ದರಿಂದ ಪಠಾಣ್ ಚಿತ್ರಕ್ಕೆ ಅದರ ಕಥಾಹಂದರದ ಪ್ರಕಾರ ‘ಭಾರತೀಯ ಪಠಾಣ್’ ಎಂದು ಮರುನಾಮಕರಣ ಮಾಡುವುದು ಸೂಕ್ತ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಪಠಾಣ್ ಚಿತ್ರವು ಭಾರತೀಯ ಗೂಢಚಾರಿಯೊಬ್ಬನ ಕಥೆಯನ್ನು ಹೊಂದಿದೆ. ನಾಲ್ಕು ವರ್ಷಗಳ ವಿರಾಮದ ನಂತರ ಶಾರುಖ್‌ ಖಾನ್‌ ಈ ಚಿತ್ರದ ಮೂಲಕ ತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.   

ಇದನ್ನು ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು