ಶನಿವಾರ, ಆಗಸ್ಟ್ 13, 2022
23 °C

ಅನೂಪ್‌– ಸುದೀಪ್‌ ಜೋಡಿಯ ಹೊಸ ಸಿನಿಮಾ ಟೈಟಲ್‌ ಏನು ಗೊತ್ತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಫ್ಯಾಂಟಮ್’ ಚಿತ್ರದ ನಂತರ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್‌ ಕಾಂಬಿನೇಷನ್‌ನಡಿ ಮೂಡಿ ಬರಲಿರುವ ಮತ್ತೊಂದು ಬಹುನಿರೀಕ್ಷೆಯ ಚಿತ್ರದ ಟೈಟಲ್‌ ಹೊರಬಿದ್ದಿದೆ. ಫ್ಯಾಂಟಮ್‌ ನಂತರ ಅನೂಪ್‌ ‘ಅಶ್ವತ್ಥಾಮ’ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರ "ಕಿಚ್ಚ ಕ್ರಿಯೇಷನ್ಸ್" ಸಂಸ್ಥೆಯಡಿ ನಿರ್ಮಾಣವಾಗಲಿದೆ.

ಫ್ಯಾಂಟಮ್‌ ಚಿತ್ರ ಪೂರ್ಣಗೊಂಡ ನಂತರ ಹಳೆ ಪ್ರಾಜೆಕ್ಟ್‌ ‘ಬಿಲ್ಲಾ ರಂಗ ಭಾಷಾ’ ಚಿತ್ರವನ್ನು ಈ ಜೋಡಿ ಕೈಗೆತ್ತಿಕೊಳ್ಳಲಿದೆ ಎಂದು ಸಿನಿಪ್ರಿಯರು ನಿರೀಕ್ಷೆ ಮಾಡಿದ್ದರು. ಸಿನಿಪ್ರಿಯರು ಮತ್ತು ಕಿಚ್ಚನ ಅಭಿಮಾನಿಗಳಿಗೆ ಸಪ್ರೈಜ್‌ ಕೊಡುವಂತೆ ಹೊಸ ಸಿನಿಮಾದ ಟೈಟಲ್‌ ಘೋಷಣೆಯಾಗಿದೆ. 

ಚಿತ್ರದ ಮೊದಲ ನೋಟದ ಪೋಸ್ಟರ್‌ ಕೂಡ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ಟ್ರೆಂಡಿಂಗ್‌ನಲ್ಲಿದೆ. ಪೋಸ್ಟರ್‌ನಲ್ಲಿರುವ 

ಹೆಸರು: ಅಶ್ವತ್ಥಾಮ

ತಂದೆಯ ಹೆಸರು: ದ್ರೋಣಾಚಾರ್ಯ

ವಯಸ್ಸು: 5200 ವರ್ಷ

ಮಿಷನ್‌: ಲೋಡಿಂಗ್‌....

ಈ ಅಡಿ ಟಿಪ್ಪಣಿಯೂ ಗಮನ ಸೆಳೆಯುವಂತಿದೆ. ಈ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ವಿವರವನ್ನು ಚಿತ್ರತಂಡ ಇನ್ನಷ್ಟೇ ಹಂಚಿಕೊಳ್ಳಬೇಕಿದೆ. ಕಿಚ್ಚನ ಬ್ಯಾನರ್‌ನಡಿ ನಿರ್ಮಾಣವಾಗಲಿರುವ ಈ ಚಿತ್ರ ಕೂಡ ಬಿಗ್‌ ಬಜೆಟ್‌ ಸಿನಿಮಾ ಆಗಲಿದ್ದು, ‘ಅಶ್ವತ್ಥಾಮ’ನಾಗಿ ಸುದೀಪ್‌ ಅವರನ್ನೇ ನೋಡಬಹುದೆನ್ನುವ ಲೆಕ್ಕಾಚಾರದಲ್ಲಿ ಸಿನಿಪ್ರಿಯರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು