ಸೋಮವಾರ, ಜನವರಿ 17, 2022
18 °C

ಪ್ರಿಯಾಂಕಾ-ನಿಕ್ ದಾಂಪತ್ಯದಲ್ಲಿ ನಡೆದಿರುವುದಾದರೂ ಏನು?

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌, ಹಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕದ ಖ್ಯಾತ ಪಾಪ್‌ ಗಾಯಕ ಹಾಗೂ ಪತಿ ನಿಕ್ ಜೋನಸ್ ದಾಂಪತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. 

ಇದಕ್ಕೆ ಕಾರಣ, ಪ್ರಿಯಾಂಕಾ ಚೋಪ್ರಾ ಅವರು ಇಷ್ಟು ದಿನ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂ ಪ್ರೋಫೈಲ್‌ಗಳಲ್ಲಿ ‘ಪ್ರಿಯಾಂಕಾ ಚೋಪ್ರಾ ಜೋನಸ್’ ಅಂತ ಬರೆದುಕೊಂಡಿದ್ದರು. ಆದರೆ ದಿಢೀರ್ ಅಂತ ನವೆಂಬರ್ 22ರಂದು ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ‘ಚೋಪ್ರಾ ಮತ್ತು ಜೋನಸ್’ ಹೆಸರಿಗೆ ಕತ್ತರಿ ಪ್ರಯೋಗ ಮಾಡಿ, ಸದ್ಯ ‘ಪ್ರಿಯಾಂಕಾ’ ಅಂತ ಮಾತ್ರ ಉಳಿಸಿಕೊಂಡಿದ್ದಾರೆ. 

ಪ್ರಿಯಾಂಕಾ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಪ್ರಿಯಾಂಕಾ ಮತ್ತು ನಿಕ್ ಮಧ್ಯೆ ಎಲ್ಲವೂ ಸರಿಯಿಲ್ಲ.. ಇಬ್ಬರ ಮಧ್ಯೆ ಮನಸ್ತಾಪ ಮೂಡಿದ್ದು ಈ ಕಾರಣ ತಮ್ಮ ಹೆಸರಿನಲ್ಲಿ ಪ್ರಿಯಾಂಕಾ ಬದಲಾವಣೆ ಮಾಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

ಈ ಹಿಂದೆ ಟಾಲಿವುಡ್‌ನ  ಸಮಂತಾ ಅವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದರು. ನಂತರ ಅವರು ನಾಗಚೈತನ್ಯ ಅವರಿಂದ ವಿಚ್ಚೇದನ ಪಡೆದುಕೊಂಡರು. ಇದೇ ಮಾದರಿಯಲ್ಲಿ ಪ್ರಿಯಾಂಕಾ ಮತ್ತು ನಿಕ್‌ ದಾಂಪತ್ಯ ಸಾಗಲಿದೆಯೇ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಅವರು ಮಗಳ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದು  'ವದಂತಿಗಳು  ಶುದ್ಧ ಸುಳ್ಳು, ಅಭಿಮಾನಿಗಳು ಇಂಹತ ಸುದ್ದಿಗಳನ್ನು ನಂಬಬಾರದು. ಹಾಗೇ ನೆಟ್ಟಿಗರು ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು' ಎಂದು ಅವರು ಮನವಿ ಮಾಡಿದ್ದಾರೆ.

ಇತ್ತ ಮುಂಬೈನಲ್ಲಿ ನೆಲೆಸಿರುವ ಪ್ರಿಯಾಂಕಾ ಅವರ ಆಪ್ತ ಗೆಳತಿ ಕೂಡ ಈ ಸುದ್ದಿಗಳನ್ನು ಅಲ್ಲಗಳೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇತ್ತ ಪ್ರಿಯಾಂಕಾ ಕೂಡ ನಿಕ್‌ ಅವರ ವಿಡಿಯೊಗೆ ಕಮೆಂಟ್‌ ಮಾಡಿದ್ದು 'ನಿನ್ನ ತೋಳುಗಳಲ್ಲಿ ನನ್ನ ಉಸಿರು ನಿಂತು ಹೋಗಿದೆ' ಎಂದು ಬರೆದಿದ್ದಾರೆ. 

ಈ ಎಲ್ಲಾ ಸಂಗತಿಗಳನ್ನು ಗಮನಿಸಿದರೆ ಪ್ರಿಯಾಂಕಾ ದಾಂಪತ್ಯದಲ್ಲಿ ಎಲ್ಲವೂ ಸರಿ ಇದೆ ಎಂದು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ.

ಓದಿ: ನವೆಂಬರ್ 26ರಂದು ‘ಗೋವಿಂದ, ಗೋವಿಂದ’ ಸಿನಿಮಾ ಬಿಡುಗಡೆ

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಸದ್ಯ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ.

ಓದಿ: ನಿಶ್ವಿಕಾ ಜೊತೆ ಡಾರ್ಲಿಂಗ್ ಕೃಷ್ಣನ ‘ದಿಲ್‌ ಪಸಂದ್‌’: ಮೋಡಿ ಮಾಡಿದ ಮೊದಲ ನೋಟ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು