ಗುರುವಾರ , ಮಾರ್ಚ್ 23, 2023
22 °C

‘ಮಜಿಲಿ’ ಸಿನಿಮಾಗೆ 3 ವರ್ಷ: ನಾಗ ಚೈತನ್ಯ ಜತೆ ನಟಿಸಿದ್ದ ಸಮಂತಾ ಹೇಳಿದ್ದೇನು? 

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ತೆಲುಗು ನಟ ನಾಗ ಚೈತನ್ಯ –ಸಮಂತಾ ರುತ್ ಪ್ರಭು ಅಭಿನಯದ ‘ಮಜಿಲಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ (ಬುಧವಾರ) ಮೂರು ವರ್ಷಗಳು ಕಳೆದಿವೆ. 

ಈ ಹಿನ್ನೆಲೆಯಲ್ಲಿ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ನಾಗ ಚೈತನ್ಯ ಅವರನ್ನು ಒಳಗೊಂಡಿರುವ ಸಿನಿಮಾ ಪೋಸ್ಟರ್ ಅನ್ನು ಹಂಚಿಕೊಂಡಿರುವ ಸಮಂತಾ, ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

‘ಮನಂ’, ‘ಎ ಮಾಯ ಚೇಸಾವೆ’, ‘ಆಟೋನಗರ್‌ ಸೂರ್ಯ’ ಚಿತ್ರಗಳಲ್ಲಿ ಸಮಂತಾ – ನಾಗ ಚೈತನ್ಯ ಒಟ್ಟಿಗೆ ನಟಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 

ಸಮಂತಾ ಹಾಗೂ ನಾಗ ಚೈತನ್ಯ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ನಾಲ್ಕು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಬರೆದುಕೊಂಡಿದ್ದರು. 

ಇತ್ತೀಚಿಗೆ ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ, ‘ಹೂ ಅಂತಿಯಾ ಮಾವ.. ಊಹೂ ಅಂತಿಯಾ’ ಹಾಡಿಗೆ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದರು.

ಗುಣಶೇಖರ್ ನಿರ್ದೇಶನದ ‘ಶಾಕುಂತಲಂ’ ಚಿತ್ರದಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ, ಫಿಲಿಪ್‌ ಜಾನ್‌ ನಿರ್ದೇಶನದ ‘ಅರೆಂಜ್‌ಮೆಂಟ್ಸ್‌ ಆಫ್ ಲವ್’ ಎಂಬ ಹಾಲಿವುಡ್‌ ಚಿತ್ರದಲ್ಲಿ ಸಮಂತಾ ಅಭಿನಯಿಸಲಿದ್ದಾರೆ.

ಓದಿ... ಕುವೈತ್‌ನಲ್ಲಿ ತಮಿಳು ನಟ ವಿಜಯ್​ ಅಭಿನಯದ ‘ಬೀಸ್ಟ್’ ಸಿನಿಮಾ ನಿಷೇಧ: ವರದಿ


‘ಮಜಿಲಿ’ ಸಿನಿಮಾದಲ್ಲಿ ನಾಗ ಚೈತನ್ಯ –ಸಮಂತಾ ರುತ್ ಪ್ರಭು

ಇವನ್ನೂ ಓದಿ... 

ಹೊಸ ಫೋಟೊ ಹಂಚಿಕೊಂಡ ಸಮಂತಾ: ಅಭಿಮಾನಿಗಳಿಂದ ಭಾರಿ ಮೆಚ್ಚುಗೆ

ಗೋವಾದಲ್ಲಿ ಸಬಾ ಜತೆ ಹೃತಿಕ್ ರೋಷನ್ ಪಾರ್ಟಿ: ಮಾಜಿ ಪತ್ನಿ ಸುಸಾನೆ ಖಾನ್ ಹಾಜರು?

ಮತ್ತೊಂದು ಹಾಟ್ ಫೋಟೊ ವೈರಲ್‌: ತಾವೇ ಸ್ವತಃ ಮೇಕಪ್‌ ಮಾಡಿಕೊಂಡ ದಿಶಾ ಪಟಾನಿ! 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು