ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೈಲರ್‌ ಬಿಡುಗಡೆ: ಅದ್ಯಾರು ವ್ಹೀಲ್‌ಚೇರ್‌ನಲ್ಲಿ ರೋಮಿಯೋ?

Last Updated 11 ಏಪ್ರಿಲ್ 2021, 6:25 IST
ಅಕ್ಷರ ಗಾತ್ರ

‘ವ್ಹೀಲ್‌ಚೇರ್ ರೋಮಿಯೋ’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಹ ನಿರ್ದೇಶನ, ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದ ಜಿ. ನಟರಾಜ್‌ ಅವರು ಈ ಚಿತ್ರದ ನಿರ್ದೇಶಕರು.

ಅಂಗವಿಕಲನೊಬ್ಬ ತಾನು ಮದುವೆ ಆಗಬೇಕು ಎಂದು ಆಸೆಪಟ್ಟಾಗ ಅದನ್ನು ಪೂರೈಸಲು ತಂದೆಯ ಪ್ರಯತ್ನ ಈ ಚಿತ್ರದ ಕಥಾಹಂದರ.

ರಾಮ್‌ಚೇತನ್ ಈ ಚಿತ್ರದ ನಾಯಕ. ನಟಿ ಮಯೂರಿ ಅವರು ಲೈಂಗಿಕ ಕಾರ್ಯಕರ್ತೆಯ ಪಾತ್ರ ನಿರ್ವಹಿಸಿದ್ದಾರೆ. ಹಿರಿಯನಟ ಸುಚೇಂದ್ರ ಪ್ರಸಾದ್ ವಿಕಲಾಂಗ ನಾಯಕನ ತಂದೆಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕ ಗಾಲಿ ಕುರ್ಚಿಯಲ್ಲಿ ಕುಳಿತೇ ಇರುವ ಸನ್ನಿವೇಶ. ಈ ಸನ್ನಿವೇಶದ ಸುತ್ತಲೇ ಕಥೆ ಇದೆ ಎನ್ನುತ್ತಾರೆ ನಿರ್ದೇಶಕ ನಟರಾಜ್‌.

‘ದೈಹಿಕ ಅಂಗವಿಕಲತೆಗಿಂತ ಮಾನಸಿಕ ಅಂಗವಿಕಲತೆ ನಮ್ಮಲ್ಲಿ ತುಂಬಾ ಇದೆ. ತಂದೆಯೊಬ್ಬ ಮಗನ ಆಸೆ ಪೂರೈಸಲು ಹೊರಟಾಗ ಎದುರಾಗುವ ಸಂಕಷ್ಟಗಳು, ತಾಕಲಾಟಗಳು ಈ ಚಿತ್ರದಲ್ಲಿವೆ. ಹೃದಯಕ್ಕೆ ಹತ್ತಿರವಾಗುವ ಸಂಗತಿಗಳು ಕಥೆಯಲ್ಲಿ ಬಂದುಹೋಗುತ್ತವೆ’ ಎಂದರು ನಟರಾಜ್‌.

ಚಿತ್ರದ ನಾಯಕ ರಾಮ್ ಚೇತನ್ ಮಾತನಾಡಿ, ಈ ಮೊದಲು ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದೆ. ಮೊದಲ ಚಿತ್ರದಲ್ಲೇ ಅಭಿನಯಕ್ಕೆ ಸಾಕಷ್ಟು ಅವಕಾಶವಿತ್ತು. ನಮ್ಮ ಚಿತ್ರಕ್ಕೆ ಸುಚೇಂದ್ರಪ್ರಸಾದ್, ರಂಗಾಯಣ ರಘು, ತಬಲಾನಾಣಿ ಇವರೆಲ್ಲ ಆಧಾರ ಸ್ತಂಭಗಳು ಎಂದರು. ಈ ಚಿತ್ರಕ್ಕೆ ಟ್ರಾವೆಲ್ ಕಂಪನಿ ನಡೆಸುತ್ತಿರುವ ವೆಂಕಟಾಚಲಯ್ಯ(ವೆಂಕಟೇಶ್) ಹಾಗೂ ಶ್ರೀಮತಿ ಭಾರತಿ ವೆಂಕಟೇಶ್ ಬಂಡವಾಳ ಹೂಡಿದ್ದಾರೆ.

ನಿರ್ದೇಶಕ ಜಿ.ನಟರಾಜ್ ಮಾತನಾಡಿ, ‘ಚಿತ್ರದಲ್ಲಿ ಶೇ 60ರಷ್ಟು ಸಂಭಾಷಣೆ, ಶೇ 40ರಷ್ಟು ನಾಟಕೀಯ ಸನ್ನಿವೇಶ ಇರುತ್ತದೆ’ ಎಂದರು. ಚಿತ್ರಕ್ಕೆ ಬಿ.ಜೆ. ಭರತ್‌ ಸಂಗೀತ ನಿರ್ದೇಶನ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT