ಮಂಗಳವಾರ, ಅಕ್ಟೋಬರ್ 26, 2021
21 °C

ವಿಚ್ಛೇದನಕ್ಕೆ ಡ್ರೆಸ್ಸಿಂಗ್ ಕಾರಣವೇ? ನಟಿ ವಿದ್ಯುಲ್ಲೇಖಾ ಹೇಳಿದ್ದು ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲುಗಿನ ಹಾಸ್ಯ ನಟಿ ವಿದ್ಯುಲ್ಲೇಖಾ ರಾಮನ್ ಬಿಕಿನಿಯಲ್ಲಿ ಕಾಣಿಸಿಕೊಂಡು ನೆಟ್ಟಿಗರ ಟ್ರೋಲ್‌ಗೆ ಒಳಗಾಗಿದ್ದಾರೆ. 

ವಿದ್ಯುಲ್ಲೇಖಾ ಇತ್ತೀಚೆಗೆ ಬಹುಕಾಲದ ಗೆಳೆಯ ಸಂಜಯ್‌ ಅವರನ್ನು ವಿವಾಹವಾಗಿದ್ದಾರೆ. ಕಳೆದ ವಾರ ಈ ಜೋಡಿ ಹನಿಮೂನ್‌ಗಾಗಿ ಮಾಲ್ಡೀವ್ಸ್‌ಗೆ ತೆರಳಿತ್ತು. ಹಳದಿ ಬಿಕಿನಿಯಲ್ಲಿರುವ ಚಿತ್ರವನ್ನು ವಿದ್ಯುಲ್ಲೇಖಾ ಹಂಚಿಕೊಂಡಿದ್ದರು. ಹಾಗೇ ವರ್ಷಕ್ಕೆ ಎರಡು ಸಲ ಬೀಚ್‌ ಅಥವಾ ಪ್ರಕೃತಿ ಮಡಿಲಲ್ಲಿ ರಜೆಯನ್ನು ಆನಂದಿಸಬೇಕು ಎಂದು ಬರೆದುಕೊಂಡಿದ್ದರು. 

ಕೆಲವು ನೆಟ್ಟಿಗರು ವಿದ್ಯುಲ್ಲೇಖಾ ಅವರ ಡ್ರೆಸ್ಸಿಂಗ್ ಶೈಲಿಯನ್ನು ಟೀಕಿಸಿ ಕಮೆಂಟ್‌ಗಳನ್ನು ಹಾಕಿದ್ದರು. ವಿಚ್ಛೇದನಕ್ಕೆ ಇಂತಹ ಉಡುಗೆಗಳು ಕೂಡ ಕಾರಣವಾಗಬಹುದು ಎಂದು ಕೆಲವರು ಕಾಲೆಳೆದಿದ್ದರು. 

'1920ರ ಅವಧಿ ಬಿಟ್ಟು 2021ಕ್ಕೆ ನಮ್ಮ ಮನಸ್ಥಿತಿ ಬದಲಾಗಬೇಕಿದೆ. ವಿಚ್ಛೇದನಕ್ಕೆ ಮಹಿಳೆಯ ಉಡುಗೆಯೇ ಕಾರಣವಾದರೆ, ತಮ್ಮ ವೈವಾಹಿಕ ಜೀವನದಲ್ಲಿ ಚೆನ್ನಾಗಿ ಮತ್ತು ಕ್ರಮಬದ್ಧವಾಗಿ ಬಟ್ಟೆ ಧರಿಸುವವರೆಲ್ಲರೂ ಸಂತೋಷವಾಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಾಮಾಣಿಕ ಗಂಡ ಸಿಕ್ಕಿರುವುದು ನನ್ನ ಅದೃಷ್ಟ, ಸಂಕುಚಿತ ವ್ಯಕ್ತಿತ್ವದ ಜನರನ್ನು ಬದಲಾಯಿಸಲು ಸಾಧ್ಯವಿಲ್ಲ, ಈ ಬಗ್ಗೆ ಹೆಚ್ಚು ಯೋಚಿಸಬಾರದು ಎಂದು ವಿದ್ಯುಲ್ಲೇಖಾ ಹೇಳಿದ್ದಾರೆ ಎಂದು ತೆಲುಗಿನ ’ಸಾಕ್ಷಿ’ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು