ಶುಕ್ರವಾರ, ಸೆಪ್ಟೆಂಬರ್ 25, 2020
26 °C

ಮಹೇಶ್ ಬಾಬು ಜೊತೆ ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ರೊಮ್ಯಾನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ಬ್ಯೂಟಿ ಅನನ್ಯಾ ಪಾಂಡೆ ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾದ ಮೂಲಕ ಟಾಲಿವುಡ್ ಪ್ರವೇಶಿಸುತ್ತಿರುವುದು ಈಗ ಹಳೆಯ ವಿಷಯ.

ಇತ್ತೀಚಿನ ಸುದ್ದಿಯ ಪ್ರಕಾರ ತೆಲುಗಿನ ಮತ್ತೊಂದು ಸಿನಿಮಾದಲ್ಲಿ ನಟಿಸಲು ಅನನ್ಯಾಗೆ ಅವಕಾಶ ಒದಗಿ ಬಂದಿದೆಯಂತೆ. 

ಮೂಲಗಳ ಪ್ರಕಾರ ಅನನ್ಯಾ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾದಲ್ಲಿ ಮಹಾನಟಿ ಖ್ಯಾತಿ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಆದರೆ ನಿರ್ದೇಶಕ ಪರಶುರಾಮ್ ಹಾಗೂ ನಿರ್ಮಾಣದ ಹೊಣೆ ಹೊತ್ತಿರುವ ಮೈತ್ರಿ ಮೂವಿ ಮೇಕರ್ಸ್‌ ಸಿನಿಮಾದ ಪಾತ್ರವರ್ಗದ ಕುರಿತು ಇಲ್ಲಿಯವರೆಗೆ ಎಲ್ಲಿಯೂ ತುಟಿ ತೆರೆದಿಲ್ಲ.

ಈ ಸಿನಿಮಾವು ಮಹೇಶ್ ತಂದೆ ಕೃಷ್ಣ ಅವರ ಹುಟ್ಟಿದ ದಿನವಾದ ಮೇ 31ರಂದು ಘೋಷಣೆಯಾಗಿತ್ತು. ಅಂದಿನಿಂದ ಸಿನಿಮಾದ ಬಗ್ಗೆ ಅನೇಕ ಊಹಾಪೋಹಗಳು ಹುಟ್ಟಿಕೊಳ್ಳುತ್ತಿದ್ದು ತಯಾರಕರು ಈ ಬಗ್ಗೆ ಯಾವುದೇ ಸ್ವಷ್ಟೀಕರಣ ನೀಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು