ಬುಧವಾರ, ಜೂನ್ 23, 2021
21 °C

ಅನುಪ‍ಮಾಗೆ ಬ್ರೇಕ್ ನೀಡಲಿದೆಯೇ ‘18 ಪೇಜಸ್’ ಸಿನಿಮಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ನಿಖಿಲ್‌ ಅಭಿನಯದ ‘18 ಪೇಜಸ್’ ಸಿನಿಮಾಕ್ಕೆ ಬಬ್ಲಿ ಬ್ಯೂಟಿ ಅನುಪಮಾ ಪರಮೇಶ್ವರನ್ ನಾಯಕಿ ಎಂಬ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಸಿನಿಮಾ ಆಕೆಗೆ ಬ್ರೇಕ್ ನೀಡುವುದೇ ಎಂಬ ಪ್ರಶ್ನೆಯೂ ಈಗ ಕೇಳಿಬರುತ್ತಿದೆ. 

ತಮ್ಮ ಮೊದಲನೇ ಚಿತ್ರದಿಂದಲೂ ಅದ್ಭುತ ನಟನಾ ಕೌಶಲ ಹಾಗೂ ಗ್ಲ್ಯಾಮರ್ ಕಾರಣದಿಂದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದರು ನಟಿ ಅನುಪಮಾ‌. ಕಡಿಮೆ ಅವಧಿಯಲ್ಲೇ ಅತೀ ಹೆಚ್ಚು ಅವಕಾಶಗಳು ಇವರನ್ನು ಅರಸಿ ಬಂದಿದ್ದವು. ಅಲ್ಲದೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಈಕೆ 1.7ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದು ಆಕೆ ದಕ್ಷಿಣ ಭಾರತದಲ್ಲಿ ಸ್ಟನ್ನಿಂಗ್ ನಟಿ ಎಂಬುದನ್ನು ಸಾಬೀತು ಪಡಿಸಿದೆ.

ಗ್ಲ್ಯಾಮರ್ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು ಕೂಡ ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕು ಎಂದರೆ ಹಿಟ್ ಸಿನಿಮಾಗಳನ್ನು ನೀಡಬೇಕು. ಹಾಗಾಗಿ ಸಿನಿ ಮಾರುಕಟ್ಟೆಯಲ್ಲಿ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳಲು ಹಿಟ್ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ ಅನುಪಮಾ.

ಸದ್ಯದ ಸುದ್ದಿಯ ಪ್ರಕಾರ ನಟ ನಿಖಿಲ್ ಅಭಿಯನದ ತೆಲುಗಿನ ’18 ಪೇಜಸ್’ ಸಿನಿಮಾಕ್ಕೆ ಅನುಪಮಾ ಅವರನ್ನು ಆಯ್ಕೆ ಮಾಡಲಾಗಿದೆಯಂತೆ. ಅನೇಕ ದಿನಗಳಿಂದ ಈ ನಟಿ ಜೊತೆ ಸಿನಿಮಾ ತಯಾರಕರು ಮಾತುಕತೆ ನಡೆಸುತ್ತಿದ್ದು ಸದ್ಯದಲ್ಲೇ ಈ ಬಬ್ಲಿ ಬ್ಯೂಟಿಯಿಂದ ಉತ್ತರ ನಿರೀಕ್ಷಿಸಬಹುದು ಎನ್ನಲಾಗುತ್ತಿದೆ. ಈ ಸಿನಿಮಾವಾದರೂ ಅನುಪಮಾಗೆ ಬ್ರೇಕ್ ನೀಡುವುದೇ ಕಾದು ನೋಡಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು