ಗುರುವಾರ , ಮೇ 26, 2022
30 °C

‘ಸಲಾರ್‌’ಗೆ ಎಂಟ್ರಿ ಕೊಡಲಿದ್ದಾರಾ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಭಾಸ್ ಸಾರಥ್ಯದಲ್ಲಿ ತಯಾರಾಗುತ್ತಿರುವ ‘ಸಲಾರ್’ ಸಿನಿಮಾ ಘೋಷಣೆಯಾದಾಗಿನಿಂದ ಭಾರಿ ಕುತೂಹಲ ಹುಟ್ಟು ಹಾಕುತ್ತಿದೆ. ಇಬ್ಬರೂ ಈಗಾಗಲೇ ಭಾರತೀಯ ಸಿನಿರಂಗದಲ್ಲಿ ಹೆಸರು ಮಾಡಿರುವ ಕಾರಣ ಇವರ ಅಭಿಮಾನಿಗಳು ಸಲಾರ್ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಅದರಲ್ಲೂ ತೆಲುಗು ಹಾಗೂ ಕನ್ನಡ ಸಿನಿರಂಗದಲ್ಲಿ ಸಲಾರ್ ಬಗ್ಗೆ ಒಂದಿಷ್ಟು ನಿರೀಕ್ಷೆಗಳು ಹೆಚ್ಚೇ ಇವೆ ಎನ್ನಬಹುದು.

ಪ್ಯಾನ್‌ ಇಂಡಿಯಾ ಸಿನಿಮಾದ ಸಲಾರ್‌ಗೆ ಪಾತ್ರವರ್ಗಗಳ ಆಯ್ಕೆಯಲ್ಲಿ ತೊಡಗಿದೆ ಚಿತ್ರತಂಡ. ಸದ್ಯದ ಸುದ್ದಿಯ ಪ್ರಕಾರ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್ ಅವರನ್ನು ಮುಖ್ಯಪಾತ್ರವೊಂದರಲ್ಲಿ ನಟಿಸಲು ಕೇಳಿಕೊಳ್ಳಲಾಗಿದೆಯಂತೆ. ಅಲ್ಲದೇ ಅವರಿಗೆ ₹ 20 ಕೋಟಿ ಸಂಭಾವನೆ ನಿಗದಿ ಮಾಡಲಾಗಿದೆಯಂತೆ.

ಮಲಯಾಳಂ ಸಿನಿರಂಗದಲ್ಲಿ ಮೋಹನ್‌ಲಾಲ್ ಅವರದ್ದು ದೊಡ್ಡ ಹೆಸರು. ಅವರ ಖ್ಯಾತಿಯನ್ನು ಪರಿಗಣಿಸಿ ನಿರ್ದೇಶಕರು ತಮ್ಮ ಸಿನಿಮಾಕ್ಕೆ ಮೋಹನ್‌ ಅವರನ್ನು ಕರೆತರುವ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. 2021ರ ಜನವರಿಯಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು ಯೋಜನೆಯಂತೆ ಎಲ್ಲವೂ ನಡೆದರೆ 2022ಕ್ಕೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

ಸದ್ಯ ಪ್ರಭಾಸ್ ರಾಧೆ ಶ್ಯಾಮ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದು ಪ್ರಶಾಂತ್ ನೀಲ್ ಕೆಜಿಎಫ್‌ ಚಾಪ್ಟರ್‌ 2ನಲ್ಲಿ ತೊಡಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು