ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಬಿಟ್ಸ್‌: ‘ಎಕ್ಸ್‌ ಆಂಡ್‌ ವೈ’ ತೆರೆಗೆ ಬರಲು ಸಿದ್ಧ

Published : 1 ಅಕ್ಟೋಬರ್ 2024, 23:30 IST
Last Updated : 1 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

‘ರಾಮಾ ರಾಮಾ ರೆ’, ‘ಒಂದಲ್ಲಾ ಎರಡಲ್ಲಾ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಡಿ.ಸತ್ಯಪ್ರಕಾಶ್‌ ನಿರ್ದೇಶನದ ‘ಎಕ್ಸ್‌ ಆಂಡ್‌ ವೈ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. 

‘ಎಕ್ಸ್‌ ಆಂಡ್‌ ವೈ’ ಕ್ರೋಮೋಝೋಮ್‌ಗಳನ್ನು ಪ್ರತಿನಿಧಿಸುತ್ತವೆ. ಆದರೆ, ಇದು ಕೇವಲ ಕ್ರೋಮೋಝೋಮ್‌ಗೆ ಸಂಬಂಧಪಟ್ಟಿರುವ ಚಿತ್ರವಲ್ಲ. ಇಡೀ ಸಮಾಜ ಬೆಸೆದಿರುವುದು ಈ ಕ್ರೋಮೋಝೋಮ್‌ ಮೇಲೆ. ಹೀಗಾಗಿ ಈ ಶೀರ್ಷಿಕೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರಲು ಯತ್ನಿಸುತ್ತಿದ್ದೇವೆ’ ಎಂದಿದ್ದಾರೆ ಸತ್ಯಪ್ರಕಾಶ್‌. 

ಇದೊಂದು ಫ್ಯಾಂಟಸಿ ಹ್ಯೂಮರ್‌ ಜಾನರ್‌ನ ಚಿತ್ರವಾಗಿದ್ದು, ಮದುವೆ ಆದವರಿಗೆ, ಆಗುತ್ತಿರುವವರಿಗೆ ಹಾಗೂ ಆಗಬೇಕು ಅಂದುಕೊಂಡವರಿಗೆ ಎಲ್ಲರಿಗೂ ಕನೆಕ್ಟ್‌ ಆಗುವಂತಹ ಮನರಂಜನಾತ್ಮಕ ಕಥೆ ಹೊಂದಿದೆ ಎಂದು ಚಿತ್ರತಂಡ ಹೇಳಿತ್ತು. ‘ಮ್ಯಾನ್‌ ಆಫ್‌ ದ ಮ್ಯಾಚ್‌’ ಚಿತ್ರದ ನಟ ಅಥರ್ವ ಪ್ರಕಾಶ್‌, ‘ದೂರದರ್ಶನ’ ಸಿನಿಮಾ ನಾಯಕಿ ಅಯನಾ ಹಾಗೂ ಬೃಂದಾ ಆಚಾರ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ದೊಡ್ಡಣ್ಣ, ವೀಣಾ ಸುಂದರ್‌, ಸುಂದರ್‌ ಮೊದಲಾದವರು ತಾರಾಗಣದಲ್ಲಿದ್ದಾರೆ. 

ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಸತ್ಯ ಪಿಕ್ಚರ್ಸ್‌ ಬ್ಯಾನರ್‌ ನಿರ್ಮಾಣದ ಈ ಚಿತ್ರಕ್ಕೆ ಲವಿತ್‌ ಛಾಯಾಚಿತ್ರಗ್ರಹಣ, ಕೌಶಿಕ್‌ ಹರ್ಷ ಸಂಗೀತ, ಬಿ.ಎಸ್‌.ಕೆಂಪರಾಜು ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT