ಗುರುವಾರ , ಫೆಬ್ರವರಿ 25, 2021
19 °C

ಮಾಲ್ಡೀವ್ಸ್‌ನಲ್ಲಿ ಯಶ್‌-ರಾಧಿಕಾ ದಂಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂದನವನದ ಸ್ಟಾರ್ ನಟ ಯಶ್ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಮಾಲ್ಡೀವ್ಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಪತ್ನಿ ರಾಧಿಕಾ, ಮಗಳು ಐರಾ ಹಾಗೂ ಮಗ ಅರ್ಥವ್‌ ಜೊತೆ ಮಾಲ್ಡೀವ್ಸ್‌ನಲ್ಲಿರುವ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಯಶ್‌. 

ಯಶ್ ಅಭಿನಯದ ಮುಂದಿನ ಕೆಜಿಎಫ್‌ ಚಾಪ್ಟರ್ – 2 ಸಿನಿಮಾ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಟೀಸರ್‌ ಬಿಡುಗಡೆಯಾದ ಕೆಲ ದಿನಗಳಲ್ಲೇ ಇತಿಹಾಸ ಸೃಷ್ಟಿಸಿತ್ತು. ಕೆಜಿಎಫ್‌ ಸಿನಿಮಾ ಯಶ್‌ಗೆ ದೇಶದಾದ್ಯಂತ ಹೆಸರು ತಂದುಕೊಟ್ಟಿದ್ದಲ್ಲದೇ ಅಭಿಮಾನಿ ಬಳಗವನ್ನೇ ಹುಟ್ಟುಹಾಕಿದೆ.

ಕೆಜಿಎಫ್ ಚಾಪ್ಟರ್– 2 ನ ಶೂಟಿಂಗ್‌ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಮುಕ್ತಾಯಗೊಂಡಿತ್ತು. ಇದರಲ್ಲಿ ಬಾಲಿವುಡ್‌ ದಿಗ್ಗಜರಾದ ಸಂಜಯ್‌ ದತ್‌, ರವೀನಾ ಟಂಡನ್‌ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು