ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಸಲಾಂ ರಾಕಿ ಭಾಯ್ ಎಂದು ನಟ ಯಶ್‌ರನ್ನು ಕಿಚಾಯಿಸಿದ ಮಗಳು

ಅಕ್ಷರ ಗಾತ್ರ

ಬೆಂಗಳೂರು: ನಟ ಯಶ್ ಅವರ ಕೆಜಿಎಫ್–2 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ₹1,000 ಕೋಟಿ ಗಳಿಕೆ ಮಾಡುವ ಮೂಲಕ ಭರ್ಜರಿ ಸದ್ದು ಮಾಡುತ್ತಿದೆ.

ಈ ನಡುವೆ ಯಶ್, ಮನೆಯಲ್ಲಿ ಮಕ್ಕಳ ಜತೆ ಸಮಯ ಕಳೆಯುತ್ತಾ, ಚಿತ್ರದ ಯಶಸ್ಸನ್ನು ಸಂಭ್ರಮಿಸಿದ್ದಾರೆ. ಅದರಲ್ಲೂ ವಿಶೇಷವಾಗಿ, ಮಗಳು ಐರಾಳ ತುಂಟಾಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವರು ಪೋಸ್ಟ್ ಮಾಡುತ್ತಿರುತ್ತಾರೆ.

ಯಶ್ ಪುತ್ರಿ ಐರಾ, ಪ್ರತಿದಿನವೂ, ಕೆಜಿಎಫ್–2 ಚಿತ್ರದ ‘ಸಲಾಂ ರಾಕಿ ಭಾಯ್‘ ಹಾಡನ್ನು ಜೋರಾಗಿ ಹೇಳುತ್ತಾ ಕೇಕೆ ಹಾಕಿಕೊಂಡು ನಗುತ್ತಾಳೆ. ಈ ಕ್ಷಣಗಳ ವಿಡಿಯೊ ಸೆರೆಹಿಡಿದಿರುವ ಯಶ್, ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಹಾಡಿನ ಮೊದಲ ಸಾಲನ್ನು ಹೇಳಿದ ಬಳಿಕ, ಜೋರಾಗಿ ನಗುವ ಐರಾ, ತಂದೆ ಯಶ್‌ರನ್ನು ಕಿಚಾಯಿಸುವಂತಿದೆ. ಮಗಳು ದಿನವೂ ಬೆಳಿಗ್ಗೆ ಹೀಗೆ ಹೇಳುವ ಮೂಲಕ ನನ್ನನ್ನು ತಮಾಷೆ ಮಾಡುತ್ತಿರುತ್ತಾಳೆ ಎಂದು ಯಶ್ ಹೇಳಿಕೊಂಡಿದ್ದಾರೆ.

ಯಶ್ ಪುತ್ರಿ ಐರಾ ಕ್ಯೂಟ್ ವಿಡಿಯೊ, ಜನರ ಮನಗೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT