ಸೋಮವಾರ, ಡಿಸೆಂಬರ್ 5, 2022
20 °C

ಗುರಿಯನ್ನು ತಲು‍ಪಲು ದಾರಿಯಿದೆ, ಗುರುತಿಸುವುದು ಸವಾಲು: ಯಶ್‌!

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೆಜಿಎಫ್‌–2 ಚಿತ್ರದಲ್ಲಿ ಯಶ್‌

ಕೆಜಿಎಫ್‌–2ನಲ್ಲಿ ಗನ್‌ ಹಿಡಿದು ಶತ್ರು ಸೇನೆಯನ್ನು ಧೂಳಿಪಟಗೊಳಿಸಿದ್ದ ರಾಕಿಭಾಯ್‌ ಯಶ್‌, ಮತ್ತೆ ಅಬ್ಬರಿಸಿದ್ದಾರೆ. ಆದರೆ ಈ ಸಲ ಯಾವುದೇ ಸಿನಿಮಾಕ್ಕಾಗಿ ಅಲ್ಲ. ಬದಲಿಗೆ, ಅಮೆರಿಕ ಪ್ರವಾಸದಲ್ಲಿರುವ ಯಶ್‌ ಅಲ್ಲಿನ ಶೂಟಿಂಗ್‌ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ತಾವು ಶೂಟ್‌ ಮಾಡಿ ಗುರಿ ತಲುಪಿದ ಪೋಸ್ಟ್‌ ಅನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಹಾಲಿವುಡ್‌ ನಿರ್ದೇಶಕನ ಜೊತೆ ಅಮೆರಿಕದ ತರನ್ ಟ್ಯಾಕ್ಟಿಕಲ್ ಇನ್ನೋವೇಶನ್ಸ್ ಶೂಟ್‌ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿರುವ ಯಶ್‌, ಗನ್‌ ಹಿಡಿದು ಶೂಟ್‌ ಮಾಡಿ ಟಾರ್ಗೆಟ್‌ ತಲುಪಿದ ವಿಡಿಯೊ ಹಂಚಿಕೊಂಡಿದ್ದಾರೆ. ಜೊತೆಗೆ ಯಾವಾಗಲೂ ಗುರಿ ತಲುಪಲು ದಾರಿಗಳಿರುತ್ತವೆ. ಆದರೆ, ‌ಅದನ್ನು ಹುಡುಕುವುದು ಸವಾಲು ಎಂಬ ಸಾಲುಗಳನ್ನು ಬರೆದು ಹಂಚಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕಷ್ಟಪಟ್ಟು ಬೆಳೆದು ಬಂದ ಯಶ್‌ ಸ್ಫೂರ್ತಿದಾಯಕ ಡೈಲಾಗ್‌ಗಳಿಂದಲೇ ಚಿರಪರಿಚಿತ. ಕೆಜಿಎಫ್‌ ಚಿತ್ರದಲ್ಲಿಯೂ ಬೆಳವಣಿಗೆಗೆ ಹುಮ್ಮಸ್ಸು ನೀಡುವ, ವಂಶಪಾರಂಪರ್ಯದ ಗೆಲುವುಗಳನ್ನು ಅಣಕಿಸುವ ಒಂದಷ್ಟು ಡೈಲಾಗ್‌ಗಳನ್ನು ಹೇಳಿ ಯಶ್‌ ಪ್ರೇಕ್ಷಕರ ಮನ ಗೆದ್ದಿದ್ದರು. ಈಗ ಕೂಡ ಗುರಿ ತಲುಪುವ ದಾರಿ ತೋರಿಸಿರುವ ಯಶ್‌ ಪೋಸ್ಟ್‌ ಸಖತ್‌ ವೈರಲ್‌ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು