‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾದಲ್ಲಿ ನಟ ಯಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಚಿತ್ರತಂಡ ಗುರುವಾರ (ಜ.8) ಬಹಿರಂಗಗೊಳಿಸಿದೆ. ಯಶ್ ಜನ್ಮದಿನದಂದು ‘ಟಾಕ್ಸಿಕ್’ ಸಿನಿಮಾದಲ್ಲಿನ ‘ರಾಯ’ ಪಾತ್ರವನ್ನು ಪರಿಚಯಿಸುವ ವಿಡಿಯೊ ಬಿಡುಗಡೆಯಾಗಿದೆ.

ಹಾಲಿವುಡ್ ಸಿನಿಮಾ ಮಟ್ಟಕ್ಕೆ ‘ಟಾಕ್ಸಿಕ್’ ಕೊಂಡೊಯ್ಯುವ ಪ್ರಯತ್ನ
ವನ್ನು ಚಿತ್ರತಂಡ ಮಾಡಿದೆ ಎನ್ನುವುದಕ್ಕೆ ಸಾಕ್ಷಿಯಂತೆ ಈ ಪರಿಚಯ ವಿಡಿಯೊವಿದೆ. ಯಶ್ ನಟನೆಯ 19ನೇ ಸಿನಿಮಾ ಇದಾಗಿದೆ. ಇದರಲ್ಲಿ ಯಶ್ ಪಾತ್ರದ ಹೇಗಿರಲಿದೆ ಎನ್ನುವ ನಿರೀಕ್ಷೆ ಬಹಳಷ್ಟಿತ್ತು. ಆರಂಭದಲ್ಲಿ ಸಿನಿಮಾದೊಳಗಿರುವ ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಹಾಗೂ ತಾರಾ ಅವರ ಪಾತ್ರಗಳನ್ನು ಪರಿಚಯಿಸಿ ವೇದಿಕೆ ಸಿದ್ಧಪಡಿಸಿದ್ದ ಚಿತ್ರತಂಡ, ಇದೀಗ ‘ರಾಯ’ನನ್ನು ಪರಿಚಯಿಸಿದೆ. ಪರಿಚಯಿಸಿದ ಪಾತ್ರಗಳೆಲ್ಲವೂ ಕಪ್ಪು ಧಿರಿಸಿನಲ್ಲೇ ಕಾಣಿಸಿಕೊಂಡಿರುವುದು ವಿಶೇಷ.

‘ರಾಯ’ ಎನ್ನುವ ಪಾತ್ರದಲ್ಲಿ ಯಶ್ ನಟಿಸಿದ್ದು, ಆ ಪಾತ್ರದ ವ್ಯಕ್ತಿತ್ವ, ಗುಣಲಕ್ಷಣಗಳನ್ನು ಟೀಸರ್ ಮೂಲಕ ಹೇಳಲಾಗಿದೆ. ‘ಡ್ಯಾಡಿ ಈಸ್ ಹೋಮ್’ ಎನ್ನುತ್ತಾ ಕೈಯಲ್ಲಿ ಟಾಮಿ ಗನ್ ಹಿಡಿದು ಯಶ್ ತಮ್ಮ ಪಾತ್ರವನ್ನು ಬೋಲ್ಡ್ ಆಗಿಯೇ ಪರಿಚಯಿಸಿದ್ದಾರೆ. ಈ ಮೂಲಕ ‘ಟಾಕ್ಸಿಕ್’ ಕೇವಲ ಒಂದು ಪಾತ್ರದ ಮೇಲಷ್ಟೇ ನಡೆಯುವ ಕಥೆಯಲ್ಲ, ಬದಲಾಗಿ ಹಲವು ಪ್ರಬಲ ಪಾತ್ರಗಳ ಸುತ್ತ ಸುತ್ತುವ ಕಥೆ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ ನಿರ್ದೇಶಕಿ ಗೀತು ಮೋಹನ್ದಾಸ್. ‘ರಾಯ’ ಪಾತ್ರದ ಪರಿಚಯ ವಿಡಿಯೊ, ‘ಈ ಪಾತ್ರ ಹಾಗೂ ಸಿನಿಮಾ ಸಾಂಪ್ರದಾಯಿಕ ಸಿನಿಮಾವಲ್ಲ’ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದಂತಿದೆ.

‘ಟಾಕ್ಸಿಕ್’ನಲ್ಲಿ ನಟನೆಯ ಜೊತೆಗೆ ಸಹ–ಬರಹಗಾರರಾಗಿ, ಸಹ–ನಿರ್ಮಾಪಕನಾಗಿ ಯಶ್ ಹೊಸ ಹೆಜ್ಜೆ ಇಟ್ಟಿದ್ದಾರೆ. ವೆಂಕಟ್ ಕೆ.ನಾರಾಯಣ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಾನ್ಸ್ಟರ್ಮೈಂಡ್ ಕ್ರಿಯೇಷನ್ಸ್ನಡಿ ಯಶ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಸಿನಿಮಾವು ಹಿಂದಿ, ತಮಿಳು, ತೆಲುಗು, ಮಲಯಾಳ ಸೇರಿದಂತೆ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ. ಹಾಲಿವುಡ್ನ ‘ಜಾನ್ ವಿಕ್’, ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’, ‘ವಾರಿಯರ್’ ಮುಂತಾದ ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ಜೆ.ಜೆ.ಪೆರ್ರಿ ‘ಟಾಕ್ಸಿಕ್’ನ ಸಾಹಸ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ. ‘ಕೆ.ಜಿ.ಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜೀವ್ ರವಿ ಛಾಯಾಚಿತ್ರಗ್ರಹಣ, ಉಜ್ವಲ್ ಕುಲಕರ್ಣಿ ಸಂಕಲನ, ಟಿಪಿ ಅಬಿದ್ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ.
.ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಗ್ ಟ್ವಿಸ್ಟ್ಅನ್ನು ಗೆಸ್ ಮಾಡಿದ ಅಭಿಮಾನಿಗಳು.Kannada New Movie : ‘ಟಾಕ್ಸಿಕ್’ನಲ್ಲಿ ಮೆಲಿಸಾಳಾದ ರುಕ್ಮಿಣಿ ವಸಂತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.