ಶನಿವಾರ, ಜನವರಿ 23, 2021
27 °C

35ನೇ ವರ್ಷಕ್ಕೆ ಕಾಲಿರಿಸಿದ ಯಶ್‌: ಗೆಳೆಯನಿಗೆ ಹುಟ್ಟುಹಬ್ಬದ ಶುಭ ಕೋರಿದ ರಾಧಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂದನವನದ ಖ್ಯಾತ ನಟ, ಕೆಜಿಎಫ್‌ ಖ್ಯಾತಿಯ ಯಶ್‌ 35ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ನಟಿ ರಾಧಿಕಾ ಪಂಡಿತ್‌ ಗಂಡನ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ವಿಶ್ ಮಾಡಿದ್ದಾರೆ. ಗಂಡನೊಂದಿಗೆ ಕೇಕ್‌ ಮುಂದೆ ಕುಳಿತಿರುವ ಫೋಟೊ ಹಂಚಿಕೊಂಡಿರುವ ರಾಧಿಕಾ, ‘ನೀವು ನನಗೆ ಯಾಕೆ ಇಷ್ಟೊಂದು ಪರಿಪೂರ್ಣ ಜೋಡಿಯಾದಿರಿ ಎಂದು ನಾನು ಕೆಲವೊಮ್ಮೆ ಅಚ್ಚರಿಪಡುತ್ತೇನೆ. ಯಾಕೆಂದರೆ, ನೀವು ನಿಮ್ಮ ಪಾಲಿನ ಕೇಕನ್ನೂ ನನಗೆ ನೀಡಿದ್ದೀರಿ. ಇದೇ ಕಾರಣಕ್ಕೆ ಎಂಬುದು ನನಗೆ ನಂತರ ಮನವರಿಕೆಯಾಯಿತು. ನನ್ನ ಆತ್ಮೀಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಚಿತ್ರರಂಗದ ಗಣ್ಯರು, ಸಹನಟರು ಹಾಗೂ ಅಭಿಮಾನಿಗಳು ಯಶ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ನಟಿ ಪ್ರಿಯಾಂಕಾ ಯಶ್ ಅವರ ಕೊಲಾಜ್ ಫೋಟೊವನ್ನು ಹಂಚಿಕೊಂಡು ‘ಹುಟ್ಟುಹಬ್ಬದ ಶುಭಾಶಯಗಳು ಯಶ್‌, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ, ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಒಳ್ಳೆಯದು ಮಾಡಲಿ’ ಎಂದು ಬರೆದುಕೊಂಡಿದ್ದಾರೆ.

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಯಶ್‌ ಫೋಟೊ ಹಂಚಿಕೊಂಡು ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಯಶ್‌, ಇತಿಹಾಸ ಮರುಕಳಿಸಿದೆ. ಕೆಜಿಎಫ್‌ ಚಾಪ್ಟರ್‌ 2 ಟೀಸರ್‌ನೊಂದಿಗೆ ಅದು ಮುಂದುವರಿಯಲಿದೆ’ ಎಂದು ಬರೆದುಕೊಂಡಿದ್ದಾರೆ.

ವಿಜಯ್‌ ಕಿರಗಂದೂರು, ಪವನ್ ಒಡೆಯರ್‌, ಸುಮಲತಾ ಅಂಬರೀಶ್‌, ನೆನಪಿರಲಿ ಪ್ರೇಮ ಸೇರಿದಂತೆ ಅನೇಕರು ಶುಭಾಶಯ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು