ಭಾನುವಾರ, ನವೆಂಬರ್ 27, 2022
23 °C

‘ಯೆಲ್ಲೋ ಗ್ಯಾಂಗ್ಸ್‌’ ತೆರೆಗೆ ರೆಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಭಿನ್ನ ಸ್ಟುಡಿಯೋಸ್‌ ಅವರು ಕೀಲೈಟ್ಸ್‌ ಮತ್ತು ವಾಟ್‌ ನೆಕ್ಸ್ಟ್‌ ಮೂವೀಸ್‌ ಅವರ ಸಹಯೋಗದಲ್ಲಿ ನಿರ್ಮಿಸುತ್ತಿರುವ ಕ್ರೈಂ-ಥ್ರಿಲ್ಲರ್‌ ಕತೆಯ ‘ಯೆಲ್ಲೋ ಗ್ಯಾಂಗ್ಸ್‌’ ಸಿನಿಮಾ ಇದೇ ನ. 11ಕ್ಕೆ ಬಿಡುಗಡೆಯಾಗಲಿದೆ.

ಚಿತ್ರಕ್ಕೆ ರವೀಂದ್ರ ಪರಮೇಶ್ವರಪ್ಪ ಅವರ ರಚನೆ ಮತ್ತು ನಿರ್ದೇಶನವಿದೆ. ಸುಜ್ಞಾನ್‌ ಅವರ ಛಾಯಾಗ್ರಹಣ, ರೋಹಿತ್‌ ಸೋವರ್‌ ಅವರ ಸಂಗೀತ, ಸುರೇಶ್‌ ಆರ್ಮುಗಂ ಅವರ ಸಂಕಲನವಿದೆ. ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್‌ ಕುಮಾರ್‌ ಜಿ ಅವರು ಸಂಭಾಷಣೆ ಬರೆದಿದ್ದಾರೆ.

ಮನೋಜ್‌ ಪಿ., ಜಿ.ಎಂ.ಆರ್‌. ಕುಮಾರ್(ಕೆವಿಜಿ), ಜೆ.ಎನ್.ವಿ ಎಂಟರ್‌ಟೇನರ್ಸ್‌ ಮತ್ತು ಡಿ.ಎಸ್. ಪ್ರವೀಣ್‌ ಅವರು ಸಿನಿಮಾದ ಸಹ ನಿರ್ಮಾಪಕರು. ಲೋಕೇಶ್‌ ಹಿತ್ತಲಕೊಪ್ಪ ಅವರ ಕಾರ್ಯಕಾರಿ ನಿರ್ಮಾಣ ಮತ್ತು ನಿರಂಜನ್‌ ಹಾವಣಗಿ ಅವರ ಹಣಕಾಸು ನಿರ್ವಹಣೆ ಸಿನಿಮಾಕ್ಕಿದೆ. ದೇವ್‌ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜ್ವಾಡಿ, ಪ್ರದೀಪ್‌ ಪೂಜಾರಿ, ಅರುಣ್‌, ಸತ್ಯ, ನಾಟ್ಯ ರಂಗ, ವಿಠಲ್‌ ಪರೀಟ, ಉಮ್ಮತ್ತಾಲ್‌ ಸತ್ಯ,‌ ವಿನೀತ್ ಕಟ್ಟಿ, ನಂದ ಗೋಪಾಲ್‌, ದಯಾ ನೀನಾಸಂ, ಹರ್ಷ, ಪ್ರವೀಣ್‌ ಕೆಬಿ, ರವಿ ಜಿಗಣಿ, ಮಲ್ಲಿಕಾರ್ಜುನ್‌, ಮಧುಸೂದನ್‌, ಪವನ್ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು