ಗುರುವಾರ , ಏಪ್ರಿಲ್ 22, 2021
23 °C
‘ಪಿಕ್ಚರ್‌ ವಿದ್‌ ಟೀಚರ್‌’–ತಮ್ಮ ಗುರುಗಳೊಂದಿಗೆ ಇರುವ ಫೋಟೊ ಚಾಲೆಂಜ್‌ ಆರಂಭ

ಜೀವನದ ಮೌಲ್ಯ ಕಲಿಸಿದ ವಿಜಯಲಕ್ಷ್ಮಿ ಟೀಚರ್‌ ನನ್ನ ಗುರು..ನನ್ನ ಹೆಮ್ಮೆ: ಪುನೀತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜೀವನದ ಮೌಲ್ಯ ಕಲಿಸಿದ ವಿಜಯಲಕ್ಷ್ಮಿ ಟೀಚರ್‌ ನನ್ನ ಗುರು..ನನ್ನ ಹೆಮ್ಮೆ..’ ಹೀಗೆ ತಮ್ಮ ಗುರುವನ್ನು ನೆನೆದವರು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌.

ಪುನೀತ್‌ ನಟನೆಯ ‘ಯುವರತ್ನ’ ಚಿತ್ರವು ಏ.1ರಂದು ಕನ್ನಡ ಹಾಗೂ ತೆಲುಗಿನಲ್ಲಿ ತೆರೆಯ ಮೇಲೆ ಬರುತ್ತಿದ್ದು, ಚಿತ್ರದ ‘ಪಾಠಶಾಲಾ’ ಹಾಡು ಎಲ್ಲರನ್ನೂ ಸೆಳೆದಿದೆ. ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಪುನೀತ್‌ ಈ ಚಿತ್ರದಲ್ಲಿ ನಟಿಸಿದ್ದು, ‘ಪಾಠಶಾಲಾ’ ಲಿರಿಕಲ್‌ ಹಾಡಿನ ಬಿಡುಗಡೆ ಬೆನ್ನಲ್ಲೇ, ಫೇಸ್‌ಬುಕ್‌, ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ‘ಪಿಕ್ಚರ್‌ ವಿದ್‌ ಟೀಚರ್‌’–ತಮ್ಮ ಗುರುಗಳೊಂದಿಗೆ ಇರುವ ಫೋಟೊ ಚಾಲೆಂಜ್‌ ಆರಂಭವಾಗಿದೆ.

ಹೊಂಬಾಳೆ ಫಿಲ್ಮ್ಸ್‌ನ  ಕಾರ್ಯಕಾರಿ ನಿರ್ದೇಶಕ ಕಾರ್ತಿಕ್‌ ಗೌಡ ಅವರ ಸವಾಲು ಸ್ವೀಕರಿಸಿರುವ ಪುನೀತ್‌ ರಾಜ್‌ಕುಮಾರ್‌, ವಿಜಯಲಕ್ಷ್ಮಿ ಟೀಚರ್‌ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಜೊತೆಗೆ ನಟ ರಕ್ಷಿತ್‌ ಶೆಟ್ಟಿ, ಶ್ರೀಮುರುಳಿ ಹಾಗೂ ಯುವರತ್ನ ಚಿತ್ರದ ನಾಯಕಿ ಸಯೀಶಾ ಸೈಗಲ್‌ ಅವರನ್ನು ಪುನೀತ್‌ ನಾಮಿನೇಟ್‌ ಮಾಡಿದ್ದಾರೆ. ‘ನಿಮ್ಮ ನೆಚ್ಚಿನ ಶಿಕ್ಷಕರ ಜೊತೆಗಿರುವ ಫೋಟೊ ಹಾಕಿ ಮೂವರನ್ನು ನಾಮಿನೇಟ್‌ ಮಾಡಿ ಟ್ಯಾಗ್‌ ಮಾಡಿ’ ಎಂದು ಪುನೀತ್‌ ಉಲ್ಲೇಖಿಸಿದ್ದಾರೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು