ಸೋಮವಾರ, ಜನವರಿ 25, 2021
27 °C

ತೆಲುಗಿಗೂ ‘ಯುವರತ್ನ’ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಪವರ್ ಸ್ಟಾರ್’ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಪುನೀತ್‌ ನಟನೆಯ ‘ಯುವರತ್ನ’ ಚಿತ್ರದ ಅಪ್‌ಡೇಟ್‌ ನಿರೀಕ್ಷೆಯಲ್ಲಿದ್ದ ಸಿನಿರಸಿಕರಿಗೆ ಚಿತ್ರದ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ‘ಬಿಗ್‌ ಅನೌನ್ಸ್‌ಮೆಂಟ್‌’ವೊಂದನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಅಭಿಮಾನಿಗಳಿಗೆ ನೀಡುವುದಾಗಿ ಹೇಳಿದ್ದರು. ಮೊದಲೇ ಹೇಳಿದಂತೆ ‘ಯುವರತ್ನ’ದ ಫಸ್ಟ್ ಪವರ್ ಫುಲ್ ಸಾಂಗ್ ‘ಪವರ್ ಆಫ್ ಯೂತ್’ ಡಿಸೆಂಬರ್ 2ರಂದು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಇದರ ಪುನೀತ್‌ ಅಭಿಮಾನಿಗಳಿಗೆ ಅದರಲ್ಲೂ ಟಾಲಿವುಡ್ ಸಿನಿರಸಿಕರಿಗೂ ಖುಷಿ ಸುದ್ದಿಯನ್ನು ಚಿತ್ರತಂಡ ನೀಡಿದೆ.

 

 

 

‘ಯುವರತ್ನ ಚಿತ್ರ ತೆಲುಗಿನಲ್ಲೂ ಬಿಡುಗಡೆಯಾಗಲಿದೆ, ನಿಮ್ಮ ಬೆಂಬಲ ಮತ್ತು ಹಾರೈಕೆ ಇರಲಿ’ ಎಂದು ನಟ ಪುನೀತ್‌ ರಾಜ್‌ಕುಮಾರ್‌ ಕೂಡ ಟ್ವೀಟ್‌ ಮಾಡಿದ್ದಾರೆ.

 

 

 

 

ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ‘ಪವರ್ ಆಫ್ ಯೂತ್’ ಹಾಡಿನ ಸಾಹಿತ್ಯ ರಾಮ್‌ಜೋಗಯ್ಯ ಶಾಸ್ತ್ರಿ ಅವರದು. ಈ ಹಾಡನ್ನು ನಕಾಶ್‌ ಅಜೀಜ್‌ ಹಾಡಿದ್ದಾರೆ. ‌

 

 

 

 

ಈ ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಈ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ಗೆ ಜೋಡಿಯಾಗಿ ಕಾಲಿವುಡ್‌ ಬೆಡಗಿ ಶಯೇಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಪುನೀತ್ ನಟನೆಯ ಸಿನಿಮಾ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ತೆರೆ ಕಾಣಲಿದೆ. ಪುನೀತ್ ‘ಯುವರತ್ನ’ ಮೂಲಕ ಟಾಲಿವುಡ್‌ಗೂ ಪದಾರ್ಪಣೆ ಮಾಡಲಿದ್ದಾರೆ. ಟಾಲಿವುಡ್‌ನಲ್ಲೂ ‘ಯುವರತ್ನ’ಗೆ ಅದ್ಧೂರಿ ಸ್ವಾಗತ ನೀಡುತ್ತಿದ್ದಾರೆ ಟಾಲಿವುಡ್‌ ಮಂದಿ.

 

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಡಿ ಈ ಚಿತ್ರಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಎಸ್. ತಮನ್‌ ಸಂಗೀತ ಸಂಯೋಜಿಸಿದ್ದಾರೆ. ವೆಂಕಟೇಶ್‌ ಅಂಗುರಾಜ್‌ ಛಾಯಾಗ್ರಹಣವಿದೆ. ಪ್ರಕಾಶ್ ರಾಜ್‌, ವಸಿಷ್ಠ ಸಿಂಹ, ದಿಗಂತ್‌, ಸೋನು ಗೌಡ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು