ಶುಕ್ರವಾರ, ಅಕ್ಟೋಬರ್ 29, 2021
20 °C

ಕ್ರಿಕೆಟಿಗ ಯುವರಾಜ್‌ ಸಿಂಗ್‌ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದ ಕರಣ್‌ ಜೋಹರ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್‌ ಜೋಹರ್‌ ಅವರು ಕ್ರಿಕೆಟಿಗ ಯುವರಾಜ್‌ ಸಿಂಗ್‌  ಜೀವನ ಆಧರಿಸಿದ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಬಾಲಿವುಡ್‌ ಅಂಗಳದಲ್ಲಿ ಕೇಳಿಬರುತ್ತಿವೆ.

ಆದಾಗ್ಯೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ನಟನ ಆಯ್ಕೆ ಮತ್ತು ಸಿನಿಮಾ ನಿರ್ಮಾಣದ ಬಂಡವಾಳಕ್ಕೆ ಸಂಬಂಧಿಸಿದಂತೆ ಕರಣ್‌ ಜೋಹರ್‌ ಹಾಗೂ ಯುವರಾಜ್‌ ನಡುವೆ ಭಿನ್ನಾಬಿಪ್ರಾಯ ಉಂಟಾಗಿರುವುದರಿಂದ ಕರಣ್‌ ಜೋಹರ್ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. 

ತಮ್ಮ ಜೀವನ ಆಧರಿಸಿದ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ರಣವೀರ್‌ ಸಿಂಗ್‌ ಅಥವಾ ರಣಬೀರ್‌ ಕಪೂರ್‌ ಅವರೇ ಮಾಡಬೇಕು ಎಂದು ಯುವರಾಜ್‌ ಸಿಂಗ್‌ ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. ಆದರೆ ಬಂಡವಾಳ ಸಮಸ್ಯೆಯನ್ನು ಮುಂದಿಟ್ಟಿರುವ ಕರಣ್ ಜೋಹರ್‌ ಬೇರೆ ಯುವ ನಟನನ್ನು ಸೂಚಿಸಿದ್ದರು. ಇದಕ್ಕೆ ಯುವರಾಜ್ ಸಿಂಗ್ ಒಪ್ಪಿಗೆ ಸೂಚಿಸಿಲ್ಲ.

ಬಾಲಿವುಡ್‌ನಲ್ಲಿ ಈಗಾಗಲೇ ನಾಲ್ವರು ಕ್ರಿಕೆಟಿಗರ ಚಿತ್ರಗಳು ತಯರಾಗಿವೆ. ಸಚಿನ್‌, ದೋನಿ ಹಾಗೂ ಮೊಹಮ್ಮದ್ ಅಜರುದ್ದೀನ್ ಸಿನಿಮಾಗಳು ತೆರೆಕಂಡಿವೆ. ಕಪಿಲ್ ದೇವ್ ಜೀವನ ಕುರಿತ '83' ಹೆಸರಿನ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು