ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೇಲರ್‌ | ಬ್ಯಾಡ್‌ ಬಿಲೇನಿಯರ್ಸ್‌: ಮಲ್ಯ, ರಾಯ್‌, ರಾಜು, ನೀರವ್ ಕಥೆಯ ಅನಾವರಣ

Last Updated 25 ಆಗಸ್ಟ್ 2020, 10:46 IST
ಅಕ್ಷರ ಗಾತ್ರ

ಭಾರತದ ಕುಖ್ಯಾತಿಉದ್ಯಮಿಗಳಾದವಿಜಯ್‌ ಮಲ್ಯ, ನೀರವ್‌ ಮೋದಿ, ಸುಬ್ರತ ರಾಯ್‌ ಹಾಗೂ ರಾಮಲಿಂಗಾ ರಾಜು ಅವರು ನೆಟ್‌ಫ್ಲಿಕ್ಸ್ ‌ ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ!

ಹೌದು,ಶ್ರೀಮಂತಈ ನಾಲ್ವರು ಉದ್ಯಮಿಗಳ ಕಥೆಯನ್ನು ನೆಟ್‌ಫ್ಲಿಕ್ಸ್‌ ಜನರ ಮುಂದಿಡಲಿದೆ. ಅಂದ ಹಾಗೇ ಇದು ಸಣ್ಣ ಕಥೆ, ಧಾರಾವಾಹಿ ರೂಪದ ದೃಶ್ಯ ಕಥನವಲ್ಲ. ಬದಲಿಗೆ ತಜ್ಞರ ಚರ್ಚೆಗಳು, ಸುದ್ದಿ ವಾಹಿನಿಗಳ ವಿಡಿಯೊ ಕ್ಲಿಪಿಂಗ್‌ ಆಧರಿಸಿದ ಸಾಕ್ಷ್ಯಚಿತ್ರ ಮಾದರಿಯ ವೆಬ್‌ಸಿರೀಸ್‌ ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ.

ಈ ಸಾಕ್ಷ್ಯಚಿತ್ರಕ್ಕೆ ‘ಬ್ಯಾಡ್‌ ಬಾಯ್‌ ಬಿಲೇನಿಯರ್ಸ್‌: ಇಂಡಿಯಾ’ ಎಂದು ಹೆಸರಿಡಲಾಗಿದ್ದು ಇದರ ಟ್ರೇಲರ್‌ ಅನ್ನು ಮಂಗಳವಾರ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರ ವೀಕ್ಷಣೆ ಮಾಡಿದ್ದಾರೆ.

ವಂಚನೆ ಮಾಡಿ ಯಶಸ್ವಿ ಉದ್ಯಮಿಗಳಾಗಿ ಪ್ರಜ್ವಲಿಸಿದ ವಿಜಯ್‌ ಮಲ್ಯ, ನೀರವ್‌ ಮೋದಿ, ರಾಮಲಿಂಗರಾಜು ಮತ್ತುಸುಬ್ರತರಾಯ್‌ ಅವರು ಹೇಗೆ ಬ್ಯಾಂಕುಗಳಿಗೆ ವಂಚನೆ ಮಾಡಿದರು, ಉದ್ಯಮಗಳನ್ನು ಹೇಗೆ ಸ್ಥಾಪನೆ ಮಾಡಿದರು, ವಂಚಿಸಿ ವಿದೇಶಗಳಿಗೆ ಹೇಗೆ ಹಾರಿದರು ಎಂಬುದನ್ನು ತಜ್ಷರು ಈ ಸಾಕ್ಷ್ಯಚಿತ್ರದಲ್ಲಿ ಚರ್ಚೆ ನಡೆಸಲಿದ್ದಾರೆ.

ತ್ವರಿತವಾಗಿ ಉನ್ನತ ಸ್ಥಾನಕ್ಕೆ ಹೋಗಲು ಅಡ್ಡದಾರಿಗಳನ್ನು ಬಳಸಿದರೆ ಯಾವ ರೀತಿಯ ಫಲಿತಾಂಶ ಬರುತ್ತದೆ ಎಂಬುದಕ್ಕೆ ಈ ನಾಲ್ವರು ಉದಾಹರಣೆಯಾಗಿದ್ದಾರೆ ಎಂದು ಹೇಳುವ ಮೂಲಕ ಯುವ ಉದ್ಯಮಿಗಳಿಗೆ ಇಂತಹ ಹಾದಿ ತುಳಿಯಬಾರದು ಎಂಬ ಸಂದೇಶವನ್ನು ನೀಡಲಾಗಿದೆ.

ನ್ಯೂಸ್‌ ಕ್ಲಿಪಿಂಗ್‌ಗಳು, ಸಂದರ್ಶನಗಳು, ಸಂವಾದಗಳು ಹಾಗೂ ಚರ್ಚೆಗಳೇ ಇಡೀ ಸಾಕ್ಷ್ಯ ಚಿತ್ರವನ್ನು ಆವರಿಸಿರುವುದು ವಿಶೇಷ. ಬ್ಯಾಡ್‌ ಬಾಯ್‌ ಬಿಲೇನಿಯರ್ಸ್‌: ಇಂಡಿಯಾ’ ಸಾಕ್ಷ್ಯಚಿತ್ರ ಸೆಪ್ಟೆಂಬರ್‌ 2ರಂದು ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT