ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BiggBoss Kannada OTT: ರೂಪೇಶ್​ ಶೆಟ್ಟಿ ಟಾಪರ್‌, ₹ 5 ಲಕ್ಷ ಬಹುಮಾನ

Last Updated 17 ಸೆಪ್ಟೆಂಬರ್ 2022, 5:57 IST
ಅಕ್ಷರ ಗಾತ್ರ

ಬೆಂಗಳೂರು:‘ಬಿಗ್ ಬಾಸ್ ಕನ್ನಡ ಒಟಿಟಿ’(Bigg Boss Kannada OTT) ರಿಯಾಲಿಟಿ ಶೋನಲ್ಲಿ ರೂಪೇಶ್ ಶೆಟ್ಟಿ ಟಾಪರ್‌ ಆಗಿದ್ದಾರೆ.

ಅದ್ದೂರಿ ಫಿನಾಲೆ ಕಾರ್ಯಕ್ರಮದಲ್ಲಿ ಟಾಪರ್‌ ಆದ ರೂಪೇಶ್ ಶೆಟ್ಟಿ ಅವರಿಗೆ ₹5 ಲಕ್ಷ ಬಹುಮಾನ ನೀಡಲಾಯಿತು. 42 ದಿನಗಳ ಕಾಲ ನಡೆದ ಈ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಪೈಪೋಟಿ ಇತ್ತು.

ಅಂತಿಮವಾಗಿ ಫಿನಾಲೆಗೆರೂಪೇಶ್ ಶೆಟ್ಟಿ,ರಾಕೇಶ್ ಅಡಿಗ, ಸಾನ್ಯಾ ಐಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ ಪ್ರವೇಶ ಪಡೆದರು. ಇವರಲ್ಲಿರೂಪೇಶ್ ಶೆಟ್ಟಿ ಟಾಪರ್‌ ಆದರು. ಇವರು ಟಿ.ವಿ.ಸೀಸನ್‌ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ನೇರವಾಗಿ ಅವಕಾಶ ಪಡೆದರು.

ರೂಪೇಶ್‌, ಮನೆಯಲ್ಲಿ ಸಹ ಯಾವ ಸ್ಪರ್ಧಿಗಳ ಜೊತೆ ಕಿರಿಕ್‌ ಮಾಡಿಕೊಳ್ಳದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ತಾಳ್ಮೆಯಿಂದ ಟಾಸ್ಕ್‌ಗಳನ್ನು ಮಾಡುತ್ತಿದ್ದ ಅವರು ನೋಡುಗರ ಮನ ಸೆಳೆದಿದ್ದರು. ಅವರು ಹೆಚ್ಚು ಮತಗಳನ್ನು ಪಡೆಯುವ ಮೂಲಕ ಟಾಪರ್‌ ಆದರು.

‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋ ಸೆಪ್ಟೆಂಬರ್ 24ರಿಂದ ಆರಂಭವಾಗಲಿದೆ. ಅದನ್ನು ಕೂಡ ಕಿಚ್ಚ ಸುದೀಪ್ ನಡೆಸಿಕೊಡಲಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT