ಹಿರಿಯ ನಟ ವಿಷ್ಣುವರ್ಧನ್ ಅವರ ಆದರ್ಶ ಅಜರಾಮರವಾಗಿಸುವ ನಿಟ್ಟಿನಲ್ಲಿ ಡಾ.ವಿಷ್ಣುಸೇನಾ ಸಮಿತಿಯದ್ದು ಸಿಂಹ ನಡೆ. 2011ರಿಂದ ಅವರ ಹೆಸರಿನಲ್ಲಿ ಪ್ರತಿವರ್ಷ ವಿಭಿನ್ನ ವಸ್ತು ವಿಷಯ, ಗಮನ ಸೆಳೆಯುವ ಕ್ಯಾಲೆಂಡರ್‌ಗಳನ್ನು ರೂಪಿಸುತ್ತಾ ಬಂದಿರುವ ಸಮಿತಿ ಈ ವರ್ಷವೂ'ಕೋಟಿಗೊಬ್ಬ' 2021ರ ಕ್ಯಾಲೆಂಡರ್ ಹೊರ ತಂದಿದೆ.

ಏನಿದರ ವಿಶೇಷ: ಕನ್ನಡದ ವರ್ಣಮಾಲೆ ಪ್ರಕಾರ ವಿಷ್ಣುವರ್ಧನ್ ಅಭಿನಯದ ಚಿತ್ರಗಳನ್ನು ವರ್ಣಯಮವಾಗಿ ರೂಪಿಸಿರುವುದೇ ಈ ಕ್ಯಾಲೆಂಡರ್‌ನ ವಿಶೇಷ. ಅ– ಅಸಾಧ್ಯ ಅಳಿಯ, ಆ–ಆಪ್ತಮಿತ್ರ, ಇ–ಇಂದಿನ ರಾಮಾಯಣ, ಈ – ಈ ಜೀವ ನಿನಗಾಗಿ ಹೀಗೆ; ಅ ಅಕ್ಷರದಿಂದ ಳ ಅಕ್ಷರದವರೆಗೆ ಇರುವಂತಹ ಎಲ್ಲ ವಿಷ್ಣುವರ್ಧನ್ ಅಭಿನಯದ ಚಿತ್ರಗಳ ಹೆಸರುಗಳನ್ನು ಕನ್ನಡ ವರ್ಣಮಾಲೆಯೊಂದಿಗೆ ಜೋಡಿಸಿದ ವಿಶಿಷ್ಟ ಪ್ರಯತ್ನ ಈ ಕ್ಯಾಲೆಂಡರ್‌ನಲ್ಲಿ ಕಾಣಬಹುದು ಎನ್ನುತ್ತಾರೆ ಡಾ.ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ.

ಕೇವಲ ವರ್ಣಮಾಲೆ ಮಾತ್ರವಲ್ಲದೆ ಕನ್ನಡಿಗರ ಹೆಗ್ಗುರುತಾದ ಹಂಪೆ ಕಲ್ಲಿನ ರಥವನ್ನು ಈ ಕ್ಯಾಲೆಂಡರ್ ವಿನ್ಯಾಸಕ್ಕೆ ಬಳಸಲಾಗಿದೆ. ಪ್ರತಿ ಪುಟದಲ್ಲೂ ಅವರ ಅಪರೂಪದ ಫೋಟೊಗಳಿವೆ. ಪ್ರತಿ ತಿಂಗಳಿಗೂ ವಿಶೇಷ ಬಣ್ಣಗಳ ಸಂಯೋಜನೆ ಮಾಡಲಾಗಿದೆ. ಜತೆಗೆ ರಜಾ ದಿನಗಳು, ಅಮಾವಾಸ್ಯೆ, ಹುಣ್ಣಿಮೆ, ಹಬ್ಬಗಳು, ಗಣ್ಯರ ಜನ್ಮದಿನದ ಮಾಹಿತಿ ಒಳಗೊಂಡಿದೆ.

ಮತ್ತೊಂದು ವಿಶೇಷವೆಂದರೆ ಕೋಟಿಗೊಬ್ಬ ಕ್ಯಾಲೆಂಡರ್ ಸರಣಿ ಶುರುವಾಗಿ 2021ಕ್ಕೆ 10 ವರ್ಷವಾಗಲಿದೆ. ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಮತ್ತು ಡಾ.ಭಾರತಿ ವಿಷ್ಣುವರ್ಧನ್ ಅವರು ಈ ಕ್ಯಾಲೆಂಡರ್ ಸರಣಿಯ ಮೊದಲನೇ ಸಂಚಿಕೆ ಬಿಡುಗಡೆಗೊಳಿಸಿದ್ದರು. ಅಂದಿನಿಂದ ಇಂದಿನವರೆಗೆ ಈ ಕ್ಯಾಲೆಂಡರ್ ಅವರ ಅಭಿಮಾನಿಗಳ ಮನೆ ಮನದ ಮಾತಾಗಿದೆ. ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ 2021ರ ಕೋಟಿಗೊಬ್ಬ ಕ್ಯಾಲೆಂಡರ್ ಲೋಕಾರ್ಪಣೆಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.