ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಕ್ಸ್‌ವೆಲ್ ಪಾರ್ಟಿಯಲ್ಲಿ ಉಡಲು ಅನುಷ್ಕಾ ಸೀರೆ ಎರವಲು ಪಡೆದ ಡುಪ್ಲೆಸಿ ಪತ್ನಿ

ಅಕ್ಷರ ಗಾತ್ರ

ಬೆಂಗಳೂರು: ಸೆಲೆಬ್ರಿಟಿಗಳ ಜೀವನವೆಂದರೆ ಅವರ ಕುರಿತು ಅಭಿಮಾನಿಗಳು ಪ್ರತಿಯೊಂದು ವಿವರವನ್ನು ಕೂಡ ತಿಳಿದುಕೊಳ್ಳುತ್ತಾರೆ. ಅದು ಕೆಲವೊಮ್ಮೆ ಅವರಿಗೆ ಮುಜುಗರವನ್ನೂ ಉಂಟುಮಾಡುತ್ತದೆ. ಅದೇ ರೀತಿಯ ಅನುಭವವನ್ನು ಕ್ರಿಕೆಟಿಗ, ಆರ್‌ಸಿಬಿ ಕ್ಯಾಪ್ಟನ್ ಫಫ್ ಡುಪ್ಲೆಸಿ ಪತ್ನಿ ಇಮಾರಿ ಕೂಡ ಎದುರಿಸಿದ್ದಾರೆ.

ಆರ್‌ಸಿಬಿ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮದುವೆ ಬಳಿಕ ಆರ್‌ಸಿಬಿ ತಂಡ ಪಾರ್ಟಿಯಲ್ಲಿಇಮಾರಿ, ಅನುಷ್ಕಾ ಶರ್ಮಾ ಅವರಿಂದ ಎರವಲು ಪಡೆದಿದ್ದ ಸೀರೆಯನ್ನು ಉಟ್ಟಿದ್ದರು. ಹಸಿರು ಬಣ್ಣದ ಸೀರೆ ಎಲ್ಲರ ಗಮನ ಸೆಳೆದಿತ್ತು, ಜತೆಗೆ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಅವರು ಕಾಣಿಸಿಕೊಂಡಿರುವುದು ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು.

ಅದರೆ, ಇಮಾರಿ ಸೀರೆಯ ಕುರಿತು ಅಭಿಮಾನಿಗಳು ಗಮನಿಸಿದ ಅಂಶವೇನೆಂದರೆ, ಅದೇ ಸೀರೆಯನ್ನು ಅನುಷ್ಕಾ ಶರ್ಮಾ ಕೂಡ 2018ರಲ್ಲಿ ಉಟ್ಟಿದ್ದರು ಎನ್ನುವುದು!

ಇಮಾರಿ ಅವರ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡಿ, ಇದು ಅನುಷ್ಕಾ ಅವರ ಸೀರೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕೊನೆಗೂ ಈ ಬಗ್ಗೆ ಹೇಳಿಕೆ ನೀಡಿರುವ ಇಮಾರಾ, ಅನುಷ್ಕಾ ಅವರ ಬಳಿ, ಮದುವೆ ಪಾರ್ಟಿಯಲ್ಲಿ ಉಡುವುದಕ್ಕಾಗಿ ಸೀರೆಯನ್ನು ಕೇಳಿ ಪಡೆದುಕೊಂಡಿದ್ದೆ ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ, ಅನುಷ್ಕಾ ಅವರ ಸೀರೆಯ ಬಗೆಗಿನ ಗೊಂದಲಕ್ಕೂ ತೆರೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT