ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾಯಿಯಾಗಿದ್ದಾರೆ ಹ್ಯಾರಿ ಪಾಟರ್‌ನ ನಟಿ ಪದ್ಮ ಪಾಟೀಲ್

ಬೆಂಗಳೂರು:ಜೆ ಕೆ ರೋಲಿಂಗ್ ಅವರ ಜನಪ್ರಿಯ ಹ್ಯಾರಿ ಪಾಟರ್ ಸರಣಿಯಲ್ಲಿ ಪದ್ಮ ಪಾಟೀಲ್ ಆಗಿ ಕಾಣಿಸಿಕೊಂಡಿದ್ದ ನಟಿ ಅಫ್ಶಾನ್ ಆಜಾದ್ ಹೆಣ್ಣುಮಗುವಿನ ತಾಯಿಯಾಗಿದ್ದಾರೆ.

ನಟಿ ಅಫ್ಶಾನ್ ಆಜಾದ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.

ಪತಿ ನಬಿಲ್ ಖಾಜಿ ಜತೆಗಿನ ಫೋಟೊ ಹಾಗೂ ಬೇಬಿ ಬಂಪ್‌ ಫೋಟೊಗಳನ್ನು ನಟಿ ಅಫ್ಶಾನ್ ಆಜಾದ್ ಪೋಸ್ಟ್ ಮಾಡಿದ್ದು, ದೇವರು ನಮಗೆ ಅತ್ಯಂತ ಅಮೂಲ್ಯ ಉಡುಗೊರೆಯನ್ನು ಕರುಣಿಸಿದ್ದಾನೆ ಎಂದಿದ್ದಾರೆ.

ಸ್ವಲ್ಪ ವಿಶ್ರಾಂತಿಯ ಬಳಿಕ ನಾನು ಚೇತರಿಸಿಕೊಳ್ಳುತ್ತೇನೆ, ನಂತರ ಈ ಸುಂದರ ಕ್ಷಣಗಳನ್ನು ಅನುಭವಿಸಲಿದ್ದೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗೆ ಧನ್ಯವಾದಗಳು ಎಂದು ಅಫ್ಶಾನ್ ಆಜಾದ್ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT