ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಪಲ್‌ ಸುನಿ ನಿರ್ದೇಶನದ ಒಂದು ಸರಳ ಪ್ರೇಮಕಥೆ ಒಟಿಟಿಗೆ

Published 20 ಮಾರ್ಚ್ 2024, 2:50 IST
Last Updated 20 ಮಾರ್ಚ್ 2024, 2:50 IST
ಅಕ್ಷರ ಗಾತ್ರ

ಬೆಂಗಳೂರು: ವಿನಯ್‌ ರಾಜ್‌ಕುಮಾರ್‌ ನಟನೆಯ ಸಿಂಪಲ್‌ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮ ಕಥೆ’ ಚಿತ್ರ ಒಟಿಟಿಗೆ ಕಾಲಿಟ್ಟಿದೆ. ಫೆ.8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರ ಉತ್ತಮ ಪ್ರತಿಕ್ರಿಯೆ ಕಂಡಿತ್ತು.

ಅಮೇಜಾನ್‌ ಪ್ರೈಮ್‌ ಒಟಿಟಿಯಲ್ಲಿ ಚಿತ್ರ ಇಂದು ಬಿಡುಗಡೆಯಾಗಿದೆ.

ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್‌ಗೆ ಸ್ವತಿಷ್ಠ ಕೃಷ್ಣನ್ ಹಾಗೂ ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಜೋಡಿಯಾಗಿದ್ದಾರೆ. ನಟ ರಾಘವೇಂದ್ರ ರಾಜ್‌ಕುಮಾರ್‌ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ.  

ಇದೇ ಮೊದಲ ಬಾರಿಗೆ ಮಲ್ಲಿಕಾ ಸಿಂಗ್‌ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ಕನ್ನಡಕ್ಕೆ ಡಬ್‌ ಆಗಿದ್ದ ಹಿಂದಿಯ ರಾಧಾ ಕೃಷ್ಣ ಧಾರಾವಾಹಿಯ ಮೂಲಕ ಮಲ್ಲಿಕಾ ಸಿಂಗ್‌ ಕನ್ನಡಿಗರಿಗೆ ಪರಿಚಿತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT