ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಥ್ರಿಲ್ಲರ್ ಸಿನಿಮಾ ಪ್ರಿಯರ ಗಮನ ಸೆಳೆದ ತ್ರಿಶಾ ನಟನೆಯ 'ಬೃಂದಾ' ವೆಬ್ ಸಿರೀಸ್

ನಟಿ ತ್ರಿಶಾ ಕೃಷ್ಣನ್ ಮುಖ್ಯಪಾತ್ರದಲ್ಲಿರುವ ಹೊಸ ವೆಬ್ ಸಿರೀಸ್ ‘ಬೃಂದಾ’ ಸೋನಿ ಲಿವ್ (SonyLIV) ನಲ್ಲಿ ಬಿಡುಗಡೆಯಾಗಿದ್ದು ಥ್ರಿಲ್ಲರ್ ಸಿನಿಮಾ ಪ್ರಿಯರ ಗಮನ ಸೆಳೆದಿದೆ.
Published : 12 ಆಗಸ್ಟ್ 2024, 11:38 IST
Last Updated : 12 ಆಗಸ್ಟ್ 2024, 11:38 IST
ಫಾಲೋ ಮಾಡಿ
Comments

ಬೆಂಗಳೂರು: ನಟಿ ತ್ರಿಶಾ ಕೃಷ್ಣನ್ ಮುಖ್ಯಪಾತ್ರದಲ್ಲಿರುವ ಹೊಸ ವೆಬ್ ಸಿರೀಸ್ ‘ಬೃಂದಾ’ ಸೋನಿ ಲಿವ್ (SonyLIV) ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದು ಥ್ರಿಲ್ಲರ್ ಸಿನಿಮಾ ಪ್ರಿಯರ ಗಮನ ಸೆಳೆದಿದೆ.

ತೆಲುಗಿನಲ್ಲಿ ನಿರ್ಮಾಣವಾಗಿರುವ ಬೃಂದಾ ವೆಬ್ ಸಿರೀಸ್ ಕನ್ನಡ, ತಮಿಳು ಹಾಗೂ ಹಿಂದಿಯಲ್ಲೂ ಬಿಡುಗಡೆಯಾಗಿದೆ.

ತೆಲುಗಿನ ರಾಕ್ಷಸಡು ಸೇರಿದಂತೆ ಕೆಲ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸೂರ್ಯ ಮನೋಜ್ ವಂಗಾಲ ಈ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

8 ಎಪಿಸೋಡ್‌ಗಳನ್ನು ಹೊಂದಿರುವ ಸಿರೀಸ್‌ನಲ್ಲಿ ನಟಿ ತ್ರಿಶಾ ಪಿಎಸ್‌ಐ ಆಗಿ ಅಭಿನಯಿಸಿದ್ದಾರೆ. ಕ್ರೈಂ ಥ್ರಿಲ್ಲರ್ ಕಥೆಯ ಬಗ್ಗೆ ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ.

ಬೃಂದಾ ಸಿನಿಮಾದ ಕಥೆ, ಚಿತ್ರಕತೆ ಥ್ರಿಲ್ಲರ್ ಸಿನಿ ಪ್ರಿಯರಿಗೆ ಹೆಚ್ಚು ಇಷ್ಟವಾಗುವ ಸರಕನ್ನು ಹೊಂದಿದೆ. ತ್ರಿಶಾ ನಟನೆ ಸೇರಿದಂತೆ ಎಲ್ಲ ಎಪಿಸೋಡ್‌ಗಳು ಎಲ್ಲೂ ಬೇಸರ ತರಿಸುವುದಿಲ್ಲ. ಒಂದು ಉತ್ತಮ ವೆಬ್ ಸಿರೀಸ್ ಎಂದು ಅನೇಕ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಈ ವೆಬ್ ಸಿರೀಸ್ ಅನ್ನು ಸೋನಿ ಲಿವ್ ಬ್ಯಾನರ್ ಅಡಿ ಕೊಲ್ಲಾ ಆಶೀಸ್ ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT