ಶುಕ್ರವಾರ, ಮಾರ್ಚ್ 31, 2023
32 °C

ನಟರ ಸ್ಮಾರಕಕ್ಕೆ ನಟ ಚೇತನ್‌ ವಿರೋಧ: ಶುರುವಾಯ್ತು ಮತ್ತೊಂದು ವಿವಾದ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪ್ರಚಲಿತದ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿ ವಿವಾದ ಮೈಗಂಟಿಸಿಕೊಳ್ಳುವ ನಟ ಚೇತನ್‌, ನಿನ್ನೆ ಲೋಕಾಪರ್ಣೆಗೊಂಡ ಡಾ.ವಿಷ್ಣು ಸ್ಮಾರಕಕ್ಕೂ ಖ್ಯಾತೆ ತೆಗೆದಿದ್ದಾರೆ. ಚಲನಚಿತ್ರ ನಟರ ಸ್ಮಾರಕಗಳಿಗೆ ಕರ್ನಾಟಕದ ಸಾರ್ವಜನಿಕರ ಜಾಗ, ಹಣ, ಮತ್ತು ಸಂಪನ್ಮೂಲಗಳನ್ನು ಬಳಸಬಾರದು ಎಂದು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ವಿಷ್ಣುವರ್ಧನ್‌ ಅಭಿಮಾನಿಗಳಿಂದ ಆಕ್ರೋಶವೂ ವ್ಯಕ್ತವಾಗಿದೆ.

ಹಲವಾರು ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸುವ ಚಲನಚಿತ್ರ ಸ್ಟಾರ್‌ಗಳು, ಈಗಾಗಲೇ ನಮ್ಮ ಸಮಾಜದಲ್ಲಿ ಅನಗತ್ಯ ಪ್ರಚಾರ ಮತ್ತು ತಮ್ಮ ಚಲನಚಿತ್ರಗಳ ಯಶಸ್ಸಿಗೆ ಅನಗತ್ಯವಾಗಿ ಗಮನ ಪಡೆಯುತ್ತಾರೆ. ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತುಸಂಗ್ರಹಾಲಯಗಳಿಗೆ ಸ್ಮಾರಕ ಭೂಮಿಗಳು ಉಪಯೋಗಕ್ಕೆ ಬರುತ್ತವೆ ಎಂದು ‘ಆ ದಿನಗಳು’ ಚೇತನ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಚಿತ್ರರಂಗದ ಹಿರಿಯ ನಟ ದಿವಗಂತ ಡಾ.ವಿಷ್ಣುವರ್ಧನ್​ ಅವರ ಸ್ಮಾರಕ ಸಾಕಷ್ಟು ಕಾಲದಿಂದ ವಿವಾದದ ಗೂಡಾಗಿತ್ತು. ಬೆಂಗಳೂರು–ಮೈಸೂರು ಸುತ್ತಿ, ಕೊನೆಗೆ ನಿನ್ನೆ ಮೈಸೂರಿನಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಷ್ಣು ಸ್ಮಾರಕ ಅನಾವರಣಗೊಳಿಸಿದ್ದರು. 

ಇದರ ಬೆನ್ನಲ್ಲೇ ಚೇತನ್‌ ಪೋಸ್ಟ್‌ ಹಾಕಿರುವುದು ವಿಷ್ಣು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಕಾಂತಾರ ಚಿತ್ರದ ಕುರಿತು ಪೋಸ್ಟ್‌ ಹಾಕಿ ಚೇತನ್‌ ವಿವಾದಕ್ಕೆ ಸಿಲುಕಿದ್ದರು. ಗೌತಮ್ ಅದಾನಿ ಕುರಿತಾಗಿಯೂ ಅವರ ಸಾಮಾಜಿಮ ಮಾಧ್ಯಮ ಖಾತೆಯಲ್ಲಿ ಬರೆದುಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು