ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಚ್ಛೇದನದ ಬಳಿಕ ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡ ಧನುಷ್

ಬೆಂಗಳೂರು: ದಕ್ಷಿಣ ಚಿತ್ರರಂಗದ ಪ್ರಮುಖ ನಟ ಧನುಷ್, ಅವರು ಐಶ್ವರ್ಯಾ ರಜನಿಕಾಂತ್ ಜತೆಗಿನ ಮದುವೆ ಮುರಿದು, ವಿಚ್ಛೇದನ ಪಡೆದುಕೊಂಡಿದ್ದರು.

18 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದ ಈ ದಂಪತಿ, ಕಳೆದ ಜನವರಿಯಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದು, ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಅದಾದ ಬಳಿಕ ಧನುಷ್, ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ಚೆನ್ನೈನಲ್ಲಿ ನಡೆದ ರಾಕ್ ವಿತ್ ರಾಜಾ ಕಾರ್ಯಕ್ರಮದಲ್ಲಿ ಧನುಷ್ ಅವರು, ಮಕ್ಕಳಾದ ಯಾತ್ರ ಮತ್ತು ಲಿಂಗ ಜತೆ ಕಾಣಿಸಿಕೊಂಡಿದ್ದಾರೆ.

ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಪು ತೊಟ್ಟಿದ್ದ ಧನುಷ್, ಅವರು ಮಕ್ಕಳ ಜತೆ ಕುಳಿತುಕೊಂಡು ಇಳಯರಾಜಾ ಅವರ ಕಾರ್ಯಕ್ರಮ ವೀಕ್ಷಿಸುತ್ತಿರುವ ಚಿತ್ರಗಳು ವೈರಲ್ ಆಗಿವೆ.

ಕಳೆದ ವಾರ, ಧನುಷ್ ಅವರು ಮಾಜಿ ಪತ್ನಿ ಐಶ್ವರ್ಯಾ ಅವರ ಹೊಸ ವಿಡಿಯೊ ಅಲ್ಬಂಗೆ ಶುಭ ಹಾರೈಸಿ, ಅವರನ್ನು ಗೆಳತಿ ಎಂದು ಕರೆದಿದ್ದರು. ಐಶ್ವರ್ಯಾ ಅದಕ್ಕೆ ಧನ್ಯವಾದ ಅರ್ಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT