ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ಬಾಸ್‌ ಒಟಿಟಿ: ದಿವ್ಯಾ ಅಗರ್ವಾಲ್‌ ವಿಜೇತೆ, ಶಮಿತಾ ಶೆಟ್ಟಿಗೆ ನಿರಾಸೆ

Last Updated 19 ಸೆಪ್ಟೆಂಬರ್ 2021, 6:18 IST
ಅಕ್ಷರ ಗಾತ್ರ

ಮೊದಲ ಒಟಿಟಿ ಬಿಗ್‌ಬಾಸ್‌ನಲ್ಲಿ ಕಿರುತೆರೆ ನಟಿ ದಿವ್ಯಾ ಅಗರ್ವಾಲ್‌ ವಿಜೇತರಾಗಿದ್ದು, ಕನ್ನಡತಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ನಿರಾಸೆ ಅನುಭವಿಸಿದ್ದಾರೆ.

ವೂಟ್‌ನಲ್ಲಿ ಪ್ರಸಾರವಾದ ಮೊದಲ ಒಟಿಟಿ ಬಿಗ್‌ಬಾಸ್‌ ರಿಯಾಲಿಟಿ ಶೋ ಇದಾಗಿತ್ತು. ಕರಣ್ ಜೋಹರ್ ಇದರ ನಿರೂಪಕರಾಗಿದ್ದರು. ಒಟ್ಟು 4 ಜನ ಸ್ಫರ್ಧಿಗಳು ಫೈನಲ್‌ಗೆ ಪ್ರವೇಶ ಪಡೆದಿದ್ದರು.

ದಿವ್ಯಾ ಅಗರ್ವಾಲ್ ₹ 25 ಲಕ್ಷ ಮತ್ತು ಟ್ರೋಫಿಯನ್ನು ಬಹುಮಾನವಾಗಿ ಪಡೆದರು. ನಿಶಾಂತ್ ಮೊದಲ, ಶಮಿತಾ ಎರಡನೇ, ರಾಕೇಶ್ ಮೂರನೇರನ್ನರ್ ಅಪ್ ಆದರು. ಫೈನಲ್‌ಗೆ ಪ್ರವೇಶ ಪಡೆಯಲು ಪ್ರತೀಕ್‌ಗೆ ಅವಕಾಶ ಇತ್ತು. ಆದರೆ ಅವರು ಅದೃಷ್ಟದ ಸೂಟ್‌ಕೇಸ್ ಪಡೆದುಕೊಂಡು ಸ್ಪರ್ಧೆಯಿಂದ ಹೊರ ನಡೆದರು.

42 ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ 14 ಸ್ಪರ್ಧಿಗಳುಸೆಣೆಸಿದ್ದರು.ಶಮಿತಾ ಶೆಟ್ಟಿ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ಅಂತಿಮವಾಗಿ ದಿವ್ಯಾ ಅಗರ್ವಾಲ್ ವಿಜೇತರಾದರು.

ಶನಿವಾರ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ನಟಿ ಜೆನಿಲಿಯಾ ಡಿಸೋಜಾ, ನಟ ರಿತೇಶ್ ದೇಶ್‌ಮುಖ್, ಋತ್ವಿಕ್ ಧನಂಜಯ್, ಭಾರತಿ ಸಿಂಗ್, ಹರ್ಷ್ ಲಿಂಬಾಚಿಯಾ ಅತಿಥಿಗಳಾಗಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT